Asianet Suvarna News Asianet Suvarna News

'ಬಿಜೆಪಿ ಸರ್ಕಾರವೇ ರೋಲ್‌ ಸರ್ಕಾರ, ಅಲ್ಲ ಅಂತ ಸಿಎಂ ಹೇಳಲಿ ನೋಡೋಣ'?

ಡಿ. 5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಬಗ್ಗೆ  ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ. 

ಬೆಂಗಳೂರು (ನ. 25): ಡಿ. 5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಬಗ್ಗೆ  ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ. 

' ಮರಾಠ ನಿಗಮದ ವಿರುದ್ಧ ಮಾತ್ರವಲ್ಲ, ಸರ್ಕಾರದ ಸರ್ವಾಧಿಕಾರದ ಧೋರಣೆಯ ವಿರುದ್ಧವೂ ಮಾಡುತ್ತಿರುವ ಬಂದ್ ಇದಾಗಿದೆ. ಬಂದ್ ಮಾಡಿದ್ರೆ ಅರೆಸ್ಟ್ ಮಾಡ್ತೀವಿ ಅಂತ ಬೆದರಿಕೆ ನೀಡಿದ್ದಾರೆ. ಈ ಬೆದರಿಕೆಗೆಲ್ಲಾ ನಾವು ಬಗ್ಗುವುದಿಲ್ಲ.  ಹೋರಾಟ ಮಾಡದೇ ಯಾವ ಸರ್ಕಾರ ಬಂದಿದೆ ಹೇಳಿ ನೋಡೋಣ. ಇದೇ ಮುಖ್ಯಮಂತ್ರಿಯವರು ಹೋರಾಟ ಮಾಡಿಯೇ ಬಂದವವರಲ್ವಾ? ಎಂದು ಪ್ರಶ್ನಿಸಿದ್ದಾರೆ. 

ಮೊದಲ ಆದ್ಯತೆ ಭಾರತಕ್ಕೆ, ಆದರೂ ಕೊರೊನಾ ಲಸಿಕೆ ಸಿಗುವುದು ಡೌಟ್ ಯಾಕೆ?

'ಹೋರಾಟಗಾರರನ್ನು ರೋಲ್ ಕಾಲ್ ಎನ್ನುತ್ತಾರೆ. 17 ಜನರನ್ನು ರೋಲ್‌ಕಾಲ್‌ ಮಾಡಿಯೇ ಬಿಜಿಪಿ ಸರ್ಕಾರ ಅಧಿಕಾರಕ್ಕೆ ಬಂದಿರೋದು. ಬಿಜೆಪಿ ಸರ್ಕಾರವೇ ರೋಲ್‌ಕಾಲ್ ಸರ್ಕಾರ. ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡಬೇಡಿ' ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.