Asianet Suvarna News Asianet Suvarna News

ಲಸಿಕಾ ಅಭಿಯಾನದ ಬಗ್ಗೆ ಮೇ. 13 ರರೊಳಗೆ ನೀಲನಕ್ಷೆ ರೂಪಿಸಿ: ಹೈಕೋರ್ಟ್ ಸೂಚನೆ

- ರಾಜ್ಯದಲ್ಲಿ ಲಸಿಕೆಗಾಗಿ ಹಾಹಾಕಾರ
-ನಾಳೆಯೊಳಗೆ ನೀಲನಕ್ಷೆ ರೂಪಿಸಿ: ಹೈಕೋರ್ಟ್
- ಲಸಿಕಾ ಅಭಿಯಾನದ ಉದ್ದೇಶ ವಿಫಲಗೊಳಿಸಬೇಡಿ 

ಬೆಂಗಳೂರು (ಮೇ. 12): ರಾಜ್ಯದಲ್ಲಿ ಲಸಿಕೆ ಕೊರತೆ ಉಂಟಾಗಿದ್ದು, ಜನರು ಲಸಿಕಾ ಕೇಂದ್ರಗಳತ್ತ ನಾ ಮುಂದು, ತಾ ಮುಂದು ಎಂದು ಧಾವಿಸುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ, ಜನ ಸಾಮಾನ್ಯರ ನಡುವೆ ವಾಗ್ವಾದ ಸಾಮಾನ್ಯವಾಗಿದೆ.  ಕೊರೊನಾ ನಿಯಂತ್ರಣ, ನಿರ್ವಹಣೆ ಹಾಗೂ ಚಿಕಿತ್ಸೆ ಸಂಬಂಧಿ ಸಲ್ಲಿಕೆಯಾಗಿರುವ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಮೇ. 13 ರರೊಳಗೆ ಸೂಕ್ತ 'ನೀಲ ನಕ್ಷೆ' ರೂಪಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.

Video Top Stories