Asianet Suvarna News Asianet Suvarna News

Karnataka Bandh : ಬಂದ್ ಗೆ ಕರವೇ ಬೆಂಬಲ ಇಲ್ಲ: ನಾರಾಯಣಗೌಡ

'ಕಳೆದ 2 ವರ್ಷಗಳಿಂದ ಜನ ಸಾಮಾನ್ಯರು ಬಹಳ ಸಂಕಷ್ಟದಲ್ಲಿದ್ದಾರೆ.  ಹಾಗಿರುವಾಗ ಪದೇ ಪದೇ ಬಂದ್ ಮಾಡುವ ಅಗತ್ಯವಿಲ್ಲ. ಬಂದ್ ಹೋರಾಟದ ಮಾನದಂಡವಲ್ಲ, ಅದು ಕೊನೆಯ ಅಸ್ತ್ರವಾಗಬೇಕು' ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ. 

ಬೆಂಗಳೂರು (ಡಿ. 29):  ಡಿ. 31 ಕ್ಕೆ ಕರ್ನಾಟಕ ಬಂದ್‌ಗೆ  Karnataka Bandh) ಕರೆ ನೀಡಲಾಗಿದೆ. ಆದರೆ ಬಂದ್‌ನಿಂದ 30 ಕ್ಕೂ ಹೆಚ್ಚು ಸಂಘಟನೆಗಳು ಹಿಂದೆ ಸರಿದಿವೆ. ಬಂದ್‌ ಬೇಡವೆಂದು ಕನ್ನಡ ಸಂಘಟನೆಗಳು ನಾಳೆ ರಾಜಭವನ ಚಲೋ (Rajbhavana Chalo) ಹಮ್ಮಿಕೊಳ್ಳಲಾಗಿದೆ.

Karnataka Bandh: ಡಿ. 31 ಬಂದ್ ನಿರ್ಧಾರದಲ್ಲಿ ಬದಲಾವಣೆ ಇಲ್ಲ: ವಾಟಾಳ್ ನಾಗರಾಜ್

'ಡಿ. 31 ಬಂದ್‌ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾರೇ ವಿರೋಧ ಮಾಡಿದರೂ ಬಂದ್ ನಡೆಯುತ್ತದೆ. ಟೌನ್‌ಹಾಲ್‌ನಿಂದ ಮೆರವಣಿಗೆ ನಡೆಯುತ್ತದೆ. ನಕ್ಷತ್ರ ನಡಿಕೊಂಡು ಎಂಇಎಸ್ ನಿಷೇಧ ಮಾಡಲು ಸಾಧ್ಯವಿಲ್ಲ. ನಾವು ಎಂಇಎಸ್ ನಿಷೇಧಿಸಬೇಕೆಂದು ಬಂದ್ ನಡೆಸುತ್ತೇವೆ' ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ

'ಕಳೆದ 2 ವರ್ಷಗಳಿಂದ ಜನ ಸಾಮಾನ್ಯರು ಬಹಳ ಸಂಕಷ್ಟದಲ್ಲಿದ್ದಾರೆ.  ಹಾಗಿರುವಾಗ ಪದೇ ಪದೇ ಬಂದ್ ಮಾಡುವ ಅಗತ್ಯವಿಲ್ಲ. ಬಂದ್ ಹೋರಾಟದ ಮಾನದಂಡವಲ್ಲ, ಅದು ಕೊನೆಯ ಅಸ್ತ್ರವಾಗಬೇಕು. ಇವತ್ತು ಬೇರೆ ಬೇರೆ ರೀತಿಯ ಚಳುವಳಿಗಳನ್ನು ಮಾಡಲು ಅವಕಾಶವಿದೆ. ಅದಕ್ಕೆ ಮಾನ್ಯತೆ ಸಿಗದಿದ್ದಾಗ ಮಾತ್ರ ಬಂದ್‌ಗೆ ಕರೆ ಕೊಡಬೇಕು' ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ. 

 

Video Top Stories