ವಾಹನ ಸವಾರರೇ ಗಮನಿಸಿ; ಬೆಂಗಳೂರು ಸಂಪರ್ಕಿಸುವ ಈ ರಸ್ತೆಗಳೆಲ್ಲಾ ಬಂದ್

ರೈತರ ಹೋರಾಟ ಲೆಕ್ಕಿಸದೇ ಕರಷಿ ಮಸೂದೆ, ಭು ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆಗಳ ಜಾರಿಗೆ ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮ ಖಂಡಿಸಿ ರೈತರು, ಕಾರ್ಮಿಕರು, ದಲಿತ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. 

First Published Sep 28, 2020, 9:55 AM IST | Last Updated Sep 28, 2020, 11:17 AM IST

ಬೆಂಗಳೂರು (ಸೆ. 28): ರೈತರ ಹೋರಾಟ ಲೆಕ್ಕಿಸದೇ ಕರಷಿ ಮಸೂದೆ, ಭು ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆಗಳ ಜಾರಿಗೆ ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮ ಖಂಡಿಸಿ ರೈತರು, ಕಾರ್ಮಿಕರು, ದಲಿತ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. 

ಆಟೋ, ಟ್ಯಾಕ್ಸಿ ಸಿಗಲ್ಲ, ಓಲಾ, ಊಬರ್ ಓಡಾಡಲ್ಲ, ರಸ್ತೆಗಳೆಲ್ಲಾ ಬಂದ್; ಸಾರ್ವಜನಿಕರೇ ಎಚ್ಚರ

ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ರೈತ ಸಂಘಟನೆಗಳು ಬಂದ್ ಮಾಡಿವೆ. ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ತಡೆದು ಪ್ರತಿಭಟಿಸುತ್ತಿದ್ದಾರೆ. ಗೋರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, ತುಮಕೂರು ರಸ್ತೆಯಲ್ಲಿ ರೈತರ ಪ್ರತಿಭಟನೆ ಜೋರಾಗಿದೆ. ಏರ್‌ಪೋರ್ಟ್‌ ರಸ್ತೆಗೆ ಮಹಿಳೆಯರು ಮುತ್ತಿಗೆ ಹಾಕಿದ್ದಾರೆ.