Party Rounds: ಸಿಬಿಐ ತನಿಖೆ ವಿರುದ್ಧ ಡಿಕೆಶಿ ಅರ್ಜಿ ವಜಾ ಮಾಡಿದ ಹೈಕೋರ್ಟ್

ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್‌ ಅಸ್ತು ಅಂದಿದೆ. ಸಿಬಿಐ ತನಿಖೆ ನಡೆಯಕಬೇಕು ಹಾಗೂ ಮುಂದುವರಿಯಬೇಕು ಅಂತ ಹೈಕೋರ್ಟ್‌ ಹೇಳಿದೆ. 

First Published Apr 20, 2023, 11:18 PM IST | Last Updated Apr 20, 2023, 11:18 PM IST

ಬೆಂಗಳೂರು(ಏ.20): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ವಿರುದ್ಧದ ಡಿಕೆಶಿ ಅರ್ಜಿಯನ್ನ ಹೈಕೋರ್ಟ್ ವಜಾ ಮಾಡಿದೆ. ಈ ಮೂಲಕ ಚುನಾವಣಾ ಹೊತ್ತಲ್ಲಿ ಡಿಕೆಶಿಗೆ ಬಿಗ್‌ ಶಾಕ್‌ ಸುದ್ದಿ ಬಂದಿದೆ. ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್‌ ಅಸ್ತು ಅಂದಿದೆ. ಸಿಬಿಐ ತನಿಖೆ ನಡೆಯಕಬೇಕು ಹಾಗೂ ಮುಂದುವರಿಯಬೇಕು ಅಂತ ಹೈಕೋರ್ಟ್‌ ಹೇಳಿದೆ. ತನಿಖೆಗೆ ಸೂಚಿಸಿದ್ದ ಸರ್ಕಾರದ ಆದೇಶವನ್ನ ಹೈಕೋರ್ಟ್‌ ಎತ್ತಿ ಹಿಡಿದಿದೆ. ರಾಜ್ಯ ಸರ್ಕಾರದ ಕ್ರಮವನ್ನ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದರು. 

ನನ್ನದು ದುರಹಂಕಾರ ಅಲ್ಲ, ಸ್ವಾಭಿಮಾನ: ಎಚ್‌ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ

Video Top Stories