ಸಿದ್ದು ಸ್ವಾಭಿಮಾನಿ ಸಮಾವೇಶ ಕಬ್ಜಾ ಮಾಡಿ, ಡಿಕೆಶಿ ಹಿಡಿತದಲ್ಲಿ ಜನಕಲ್ಯಾಣ ಕಾರ್ಯಕ್ರಮ!
ಹಾಸನದಲ್ಲಿ ನಡೆಯಲಿರುವ ಸಮಾವೇಶವು ಸ್ವಾಭಿಮಾನಿ ಸಮಾವೇಶವಲ್ಲ, ಬದಲಿಗೆ ಜನಕಲ್ಯಾಣ ಸಮಾವೇಶವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿದೆ. ಈ ಮೂಲಕ ಸಮಾವೇಶವನ್ನು ಪಕ್ಷದ ಹಿಡಿತಕ್ಕೆ ತಂದ ಡಿಕೆಶಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹಾಸನದಲ್ಲಿ ನಡೆಯೋದು ಸ್ವಾಭಿಮಾನಿ ಸಮಾವೇಶ ಅಲ್ಲ, ಜನಕಲ್ಯಾಣ ಸಮಾವೇಶ. ಇದು ಪಕ್ಷಕ್ಕೆ ಸೇರಿದ ಸಮಾವೇಶ ಆಗಿರುವುದರಿಂದ ನನ್ನ ಅಧ್ಯಕ್ಷತೆಯಲ್ಲೇ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಸಿಎಂ ಸ್ವಾಭಿಮಾನಿ ಸಮಾವೇಶವನ್ನು ಕೆಪಿಸಿಸಿ ಅದ್ಯಕ್ಷ ಡಿಕೆಶಿ ಅವರು ಪಕ್ಷದ ಹಿಡಿತಕ್ಕೆ ತಂದು ಇದಕ್ಕೆ ಜನಕಲ್ಯಾಣ ಸಮಾವೇಶ ಎಂದು ಹೆಸರಿಟ್ಟಿದ್ದಾರೆ. ಇದೀಗ ಸಮಾವೇಶ ನಡೆಯೋ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಕೆಪಿಸಿಸಿ ಮುಖಂಡತ್ವದಲ್ಲಿ, ನನ್ನ ಮುಖಂಡತ್ವದಲ್ಲೇ ಸಮಾವೇಶ ನಡೆಯುತ್ತದೆ. ಸ್ವಾಭಿಮಾನಿ ಒಕ್ಕೂಟಗಳು ನಮ್ಮ ಕಾರ್ಯಕ್ರಮ ಮೆಚ್ಚಿ ಸಪೋರ್ಟ್ ಮಾಡುತ್ತಿದ್ದಾರೆ. ಅವರು ನಮಗೆ ಬೆಂಬಲ ಕೊಡ್ತಿರೋದು ಸಂತೋಷಕರ. ಪ್ರಾರಂಭದಿಂದಲೂ ದಿನಕ್ಕೊಂದು ಆಯಾಮ ಪಡೆದುಕೊಂಡ ಸಮಾವೇಶ, ಈಗ ಕೆಪಿಸಿಸಿ ಆಶ್ರಯದಲ್ಲಿ ಜನ ಕಲ್ಯಾಣ ಸಮಾವೇಶ ಎಂದು ನಾಮಕರಣ ಮಾಡಲಾಗಿದೆ. ನಾನೆ ಕಾರ್ಯಕ್ರಮದ ಅಧ್ಯಕ್ಷ, ಉಸ್ತುವಾರಿ. ಮೊದಲು ಸಿದ್ದರಾಮಯ್ಯ ಬೆಂಬಲಿಗರಿಂದ ಶಕ್ತಿ ಪ್ರದರ್ಶನಕ್ಕೆ ಸಜ್ಜುಗೊಂಡಿದ್ದ ವೇದಿಕೆಗೆ ಬ್ರೇಕ್ ಹಾಕಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿಸಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಇಡೀ ಕಾರ್ಯಕ್ರಮವನ್ನೇ ಕಬ್ಜಾ ಮಾಡಿದ್ದಾರೆ.