ಕೋವಿಡ್ ಬಳಿಕ H3N2 ವೈರಸ್ ಭೀತಿ:ಕರ್ನಾಟಕದಲ್ಲಿಯೂ ಮಹಾಮಾರಿ ಆತಂಕ
ಕೊರೋನಾ ಬಳಿಕ ದೇಶದಲ್ಲಿ H3N2 ಭೀತಿ ಎದುರಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ದೇಶದಾದ್ಯಂತ ಹೆಚ್3ಎನ್2 ರೋಗವು ವ್ಯಾಪಕವಾಗಿ ಹಬ್ಬುತ್ತಿದೆ.
ಕರೊನಾ ಬಳಿಕ ದೇಶದಾದ್ಯಂತ ಹೊಸ H3N2 ವೈರಸ್ ಆತಂಕ ಹೆಚ್ಚಾಗಿದೆ. ಕರ್ನಾಟಕದಲ್ಲಿಯೂ H3N2 ಮಹಾಮಾರಿ ವೈರಸ್ ಭೀತಿ ಕಾಡುತ್ತಿದೆ. ಮೂರು ತಿಂಗಳಿಂದ ಜ್ವರ, ಶೀತ ಕೆಮ್ಮಿನ ಹಾವಳಿಗೆ ಜನರು ತುತ್ತಾಗುತ್ತಿದ್ದಾರೆ . ಇನ್ನು ದಿನದಿಂದ ದಿನಕ್ಕೆ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಏರಿಕೆ ಆಗುತ್ತಿದ್ದು, ICMR H3N2 ವೈರಸ್ ಹೆಚ್ಚಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತ ಪಡಿಸಿದೆ . ಹಾಗೆ ಇಂದು ವೈರಸ್ ನಿರಂತ್ರಣ ಕ್ರಮದ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜೊತೆ ಸಭೆ ಇದ್ದು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ.