ಪ್ರತಿ ಶನಿವಾರವೂ ರಜೆ ನೀಡುವಂತೆ ಮನವಿ :7ನೇ ವೇತನ ಆಯೋಗಕ್ಕೆ ಸರಕಾರಿ ನೌಕರರ ಸಂಘದ ಬೇಡಿಕೆ

ರಾಜ್ಯ ಸರಕಾರಿ ಕಚೇರಿಗಳ ಕಾರ್ಯನಿರ್ವಹಣೆ ಅವಧಿಯನ್ನು  ಐದು ದಿನಗಳಿಗೆ ಸೀಮಿತಗೊಳಿಸಿ,   ಪ್ರತಿ ಶನಿವಾರವೂ ರಜೆ ನೀಡುವಂತೆ 7ನೇ ವೇತನ ಆಯೋಗಕ್ಕೆ ಸರಕಾರಿ ನೌಕರರ ಸಂಘ ಬೇಡಿಕೆ ಸಲ್ಲಿಸಿದೆ.
 

First Published Mar 6, 2023, 10:24 AM IST | Last Updated Mar 6, 2023, 10:24 AM IST

ಕೇಂದ್ರ ನೌಕರರ ಸಮಸ್ಯೆ ಆಯ್ತು ಈಗ ರಾಜ್ಯ ಸರ್ಕಾರಿ ನೌಕರರ ಸರದಿ ವೇತನ ಹೆಚ್ಚಳವಾಗ್ತಿದ್ದಂತೆ ಮತ್ತೊಂದು ಬೇಡಿಕೆಗೆ ಸರ್ಕಾರಿ ನೌಕರರ ಆಗ್ರಹ. ಪ್ರತಿ ಶನಿವಾರ ರಜೆ ನೀಡುವಂತೆ  ಸರ್ಕಾರಿ ನೌಕರರ ಮನವಿಮಾಡಿದ್ದಾರೆ.  ರಾಜ್ಯ ಸರ್ಕಾರ ನೌಕರರ ಸಂಘದಿಂದ 7ನೇ ವೇತನ ಆಯೋಗ ಸಮಿತಿಗೆ  ಬೇಡಿಕೆ ಸಲ್ಲಿಸಲಾಗಿದೆ .  ಈಗಾಗಲೇ 2ನೇ ಮತ್ತು 4ನೇ ಶನಿವಾರ ರಾಜ್ಯ ಸರಕಾರಿ ಕಚೇರಿಗಳಿಗೆ ರಜೆ ಇದ್ದು, ತಿಂಗಳ ಮೊದಲ ಮತ್ತು ಮೂರನೇ ಶನಿವಾರವೂ ಸಾರ್ವತ್ರಿಕ ರಜೆ ಘೋಷಣೆಗೆ  ಮಾಡುವಂತೆ ಮನವಿ ಮಾಡಿದೆ. ಕಚೇರಿ ವೇಳೆಯನ್ನು ಬೆಳಗ್ಗೆ 10 ಗಂಟೆ ಬದಲಿಗೆ 9.30 ಕ್ಕೆ ಹಾಗೂ ಕಚೇರಿ ಮುಗಿಯುವ ವೇಳೆಯನ್ನು ಸಂಜೆ 5.30ಕ್ಕೆ ಬದಲಾಗಿ 6 ಗಂಟೆ ವರೆಗೆ ನಡೆಸಬೇಕು ಎಂದು ತಿಳಿಸಿದೆ.