Asianet Suvarna News Asianet Suvarna News

ವ್ಯಾಕ್ಸಿನೇಷನ್ ಮಾಡಿಸೋಕೆ ಸರ್ಕಾರ ಮಾಡ್ತಿರೋ ಸರ್ಕಸ್‌ಗಳಿವು, ಇನ್ನಾದ್ರೂ ಬರ್ರಪ್ಪೋ..!

ಕೋವಿಡ್‌ ಲಸಿಕೆ ವಿತರಣೆಯಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಭಾರತ 70 ಕೋಟಿ ಡೋಸ್‌ ವಿತರಣೆಯ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಅದರಲ್ಲೂ ಕಳೆದ ಕೇವಲ 13 ದಿನಗಳಲ್ಲಿ 10 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಬೆಂಗಳೂರು (ಸೆ. 10):  ಕೋವಿಡ್‌ ಲಸಿಕೆ ವಿತರಣೆಯಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಭಾರತ 70 ಕೋಟಿ ಡೋಸ್‌ ವಿತರಣೆಯ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಅದರಲ್ಲೂ ಕಳೆದ ಕೇವಲ 13 ದಿನಗಳಲ್ಲಿ 10 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೀಗ ಲಸಿಕೆ ಸಂಗ್ರಹವಿದ್ದರೂ ತೆಗೆದುಕೊಳ್ಳಲು ಜನರೇ ಮುಂದೆ ಬರುತ್ತಿಲ್ಲ. ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಳ್ಳುವಂತೆ ಮಾಡಲು ಜಿಲ್ಲಾಡಳಿ ನಾನಾ ಕಸರತ್ತು ಮಾಡಿದೆ. 

ಶೇ. 100 ರಷ್ಟು ವ್ಯಾಕ್ಸಿನ್ ಹಾಕಿಸಿದರೆ 1 ಲಕ್ಷ ಬಹುಮಾನ

ಮನೆ ಮನೆಗೆ ತೆರಳಿ ಲಸಿಕೆ ಅಭಿಯಾನ ಮಾಡುವುದು,  ಶೇ.100 ರಷ್ಟುಲಸಿಕೆ ಹಾಕಿಸುವ ನಗರಸಭೆ ಸದಸ್ಯರನ್ನು ಸನ್ಮಾನಿಸಿ ಅವರಿಗೆ 5 ಲಕ್ಷ ರು. ನಗದು ಬಹುಮಾನ,  ಲಸಿಕೆ ಪ್ರಮಾಣ ಪ್ರಗತಿ ಸಾಧಿಸದ ವಾರ್ಡ್‌ಗಳಿಗೆ ಅನುದಾನ ತಡೆ, ಶೇ.100 ರಷ್ಟು ವ್ಯಾಕ್ಸಿನ್‌ ಲಸಿಕೆ ಪ್ರಗತಿ ರಿಪೋರ್ಟ್‌ ತೊರಿಸುವ ಅಂಗನವಾಡಿ ಶಿಕ್ಷಕಿಯರಿಗೆ 1 ಲಕ್ಷ ನಗದು ಬಹುಮಾನ ನೀಡಲಾಗುವುದು ಹೀಗೆ ಬೇರೆ ಬೇರೆ ಜನರನ್ನು ಆಕರ್ಷಿಸಲು ಆಡಳಿತ ಪ್ರಯತ್ನಿಸುತ್ತಿದೆ.