Asianet Suvarna News Asianet Suvarna News

ಶೇ.100 ರಷ್ಟು ವ್ಯಾಕ್ಸಿನ್‌ ಹಾಕಿಸಿದರೆ 1 ಲಕ್ಷ ಬಹುಮಾನ

  • ಜಿಲ್ಲಾಧಿಕಾರಿಗಳ ಆದೇಶದಂತೆ ನಗರದ 35 ವಾರ್ಡ್‌ಗಳಲ್ಲಿ ಕೊರೋನಾ ಲಸಿಕಾಕರಣ
  •  ಲಸಿಕಾಕರಣ ಶೇ. 100ರಷ್ಟು ಪ್ರಗತಿ ಸಾಧಿಸಲು ನಗರಸಭೆ ಸದಸ್ಯರೊಂದಿಗೆ ಅಂಗನವಾಡಿ ಕಾರ‍್ಯಕರ್ತೆಯರು ಕೈಜೋಡಿಸಬೇಕೆಂದು ಮನವಿ
1 lack cash price for 100 percent vaccination in KGF
Author
Bengaluru, First Published Sep 10, 2021, 12:32 PM IST
  • Facebook
  • Twitter
  • Whatsapp

ಕೆಜಿಎಫ್‌ (ಸೆ.10):  ಜಿಲ್ಲಾಧಿಕಾರಿಗಳ ಆದೇಶದಂತೆ ನಗರದ 35 ವಾರ್ಡ್‌ಗಳಲ್ಲಿ ಕೊರೋನಾ ಲಸಿಕಾಕರಣ ಶೇ. 100ರಷ್ಟು ಪ್ರಗತಿ ಸಾಧಿಸಲು ನಗರಸಭೆ ಸದಸ್ಯರೊಂದಿಗೆ ಅಂಗನವಾಡಿ ಕಾರ‍್ಯಕರ್ತೆಯರು ಕೈಜೋಡಿಸಬೇಕೆಂದು ಪೌರಾಯುಕ್ತ ನವೀನ್‌ಚಂದ್ರ ಮನವಿ ಮಾಡಿದರು..

ನಗರಸಭೆ ಸಭಾಂಗಣದಲ್ಲಿ ತಾಲೂಕು ಆರೋಗ್ಯ ಇಲಾಖೆ , ನಗರಸಭೆ ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ನಗರಸಭೆ ಸದಸ್ಯರ ಅಂಗನವಾಡಿ ಕಾರ‍್ಯಕರ್ತರು, ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೋವಿಡ್‌ ಗಂಭೀರತೆಯನ್ನು ಪರಿಗಣಿಸಿ ಇನ್ನು 10 ದಿನಗಳಲ್ಲಿ ಶೇ. 100ರಷ್ಟು ಲಸಿಕೆ ಹಾಕಿಸಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕೆಂದು ಪೌರಾಯುಕ್ತರು ಮನವರಿಕೆ ಮಾಡಿದರು.

ಕೇರಳದಿಂದ ಬರುವವರಲ್ಲಿ ಹೆಚ್ಚು ಪಾಸಿಟಿವ್ ಕೇಸ್‌ : ಉಡುಪಿಯಲ್ಲಿ ಕಠಿಣ ಕ್ರಮ

ನೋ ಲಸಿಕೆ, ನೋ ಅನುದಾನ :  ವಾರ್ಡ್‌ಗಳಲ್ಲಿ ಶೇ.100ರಷ್ಟುಲಸಿಕೆ ಹಾಕಿಸುವ ನಗರಸಭೆ ಸದಸ್ಯರನ್ನು ಸನ್ಮಾನಿಸಿ ಅವರಿಗೆ 5 ಲಕ್ಷ ರು. ನಗದು ಬಹುಮಾನವನ್ನು ನೀಡಲಾಗುವುದೆಂದು ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಸಭೆಗೆ ತಿಳಿಸಿದರು. ನಗರಸಭೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಶೇ.100 ರಷ್ಟುಲಸಿಕೆಯ ಪ್ರಗತಿ ರಿಪೋರ್ಟ್‌ ತೊರಿಸದ ನಗರಸಭೆ ಸದಸ್ಯರ ವಾರ್ಡ್‌ಗಳಿಗೆ ಅನುದಾನ ನೀಡಲಾಗುವುದು. ಲಸಿಕೆ ಪ್ರಮಾಣ ಪ್ರಗತಿ ಸಾಧಿಸದ ವಾರ್ಡ್‌ಗಳಿಗೆ ಅನುದಾನ ತಡೆ ಹಿಡಿಯಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದರು.

ಅಂಗನವಾಡಿ ಶಿಕ್ಷಕಿಯರಿಗೆ  1 ಲಕ್ಷ ರು. ನಗದು :  ಶೇ.100 ರಷ್ಟುವ್ಯಾಕ್ಸಿನ್‌ ಲಸಿಕೆ ಪ್ರಗತಿ ರಿಪೋರ್ಟ್‌ ತೊರಿಸುವ ಅಂಗನವಾಡಿ ಶಿಕ್ಷಕಿಯರಿಗೆ 1 ಲಕ್ಷ ನಗದು ಬಹುಮಾನ ನೀಡಲಾಗುವುದು. ಅದರಲ್ಲೂ 10 ದಿನಗಳಲ್ಲಿ ಶೇ.100 ರಷ್ಟುಪ್ರಗತಿ ರಿಪೋರ್ಟ್‌ ನೀಡಬೇಕು. ಶನಿವಾರ ಸಂಜೆ 4 ಗಂಟೆಯೊಳಗೆ ತಮ್ಮ ವ್ಯಾಪ್ತಿಯಲ್ಲಿ ಎಷ್ಟುಮಂದಿ ಲಸಿಕೆ ಪಡೆದಿದ್ದಾರೆ ಮತ್ತು ಎಷ್ಟುಮಂದಿ ಲಸಿಕೆ ಪಡೆದಿಲ್ಲ ಎಂಬ ರಿಪೋರ್ಟ್‌ ನೀಡಲೇಬೇಕೆಂದು ಸಭೆಗೆ ಕಟ್ಟು ನಿಟ್ಟಿನ ಆದೇಶ ನೀಡಿದರು.

ತಾಲೂಕು ವೈದ್ಯಾಧಿಕಾರಿ ಸುನೀಲ್‌ಕುಮಾರ ಮಾತನಾಡಿ, ತಾಲೂಕಿನಲ್ಲಿ ನಾವು ಹಲವು ಬಾರಿ ಲಸಿಕೆ ಅಂದೂಲನ ಹಮ್ಮಿಕೊಂಡು ಲಸಿಕೆ ಹಾಕಿಸಲಾಗಿದ್ದು, ವೃದ್ಧರು ಮಹಿಳೆಯರು ಲಸಿಕೆ ಹಾಕಿಸಿಕೊಳ್ಳುವಲ್ಲಿ ಮುಂದೆ ಬಾರದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು.

ಶಿಕ್ಷಕಿಯರ ವಿರುದ್ಧ ಸದಸ್ಯರ ಗರಂ :  ನಗರಸಭೆ ಸದಸ್ಯ ಕೋದಂಡನ್‌ ಮಾತನಾಡಿ, ಅಂಗನವಾಡಿ ಶಿಕ್ಷಕಿಯರಿಗೆ ತಮ್ಮ ವಾರ್ಡ್‌ಗಳಲ್ಲಿ ಯಾರು ಸದಸ್ಯರು ಎಂಬುದೇ ಗೊತ್ತಿಲ್ಲ. ಮೊದಲು ಅವರು ತಮ್ಮ ವಾರ್ಡ್‌ಗಳಲ್ಲಿ ಯಾರು ನಗರಸಭೆ ಸದಸ್ಯರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು, ಅಂಗನವಾಡಿ ಶಿಕ್ಷಕಿಯರು ಮನೆ ಮನೆಗೆ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಹುತೇಕ ಅಂಗನವಾಡಿ ಶಿಕ್ಷಕಿಯರು, ಸುಮ್ಮನೆ ಆರೋಪ ಮಾಡಬೇಡಿ, ಇದೀಗ ನಾವು ಬಂದಿರುವುದು ಕೋವಿಡ್‌ ವಿಚಾರವಾಗಿ ಮಾತನಾಡಲು. ಆದರೆ ವೈಯುಕ್ತಿಕವಾದ ವಿಚಾರಗಳನ್ನು ಸಭೆಯಲ್ಲಿ ತರುವುದು ಸರಿಯಲ್ಲ ಎಂದು ತಿರುಗೆಟು ನೀಡಿದರು.

ನಗರಸಭೆ ವ್ಯವಸ್ಥಾಪಕ ಅಮರ್‌ ನಾರಾಯಣ, ಶಶಿಕುಮಾರ, ಕೃಷ್ಣಮೂರ್ತಿ ಹಾಗೂ ಇತರರು ಹಾಜರಿದ್ದರು.

ನಗರಸಭೆ ಸಭಾಗಂಣದಲ್ಲಿ ಕೊವಿಡ್‌ ಲಸಿಕೆ ಜಾಗೃತಿ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಮುನಿಸ್ವಾಮಿ, ಪೌರಾಯುಕ್ತ ನವೀನ್‌ ಚಂದ್ರ ಮಾತನಾಡಿದರು.

Follow Us:
Download App:
  • android
  • ios