ಕರ್ನಾಟಕ ಬಂದ್ ದಿನಾಂಕ ಬದಲು, ಸೆ, 25 ಅಲ್ಲ, ಬದಲಿ ದಿನಾಂಕವಿದು!

ಸೆ. 25 ಕ್ಕೆ ಅಂದರೆ ಶುಕ್ರವಾರ ನಡೆಸಬೇಕೆಂದಿರುವ ಕರ್ನಾಟಕ ಬಂದನ್ನು ರೈತ ಸಂಘಟನೆಗಳು ವಾಪಸ್ ಪಡೆದಿವೆ. 25 ಕ್ಕೆ ಕರ್ನಾಟಕ ಬಂದ್ ನಡೆಸಬೇಕು, ಬೇಡ ಎನ್ನುವುದರ ಬಗ್ಗೆ ಸ್ವಲ್ಪ ಗೊಂದಲ ಉಂಟಾಗಿ ಕೊನೆಗೆ 28 ಕ್ಕೆ ನಡೆಸಲು ಮುಂದಾಗಿವೆ. 

First Published Sep 23, 2020, 4:05 PM IST | Last Updated Sep 23, 2020, 4:10 PM IST

ಬೆಂಗಳೂರು (ಸೆ. 23): ಸೆ. 25 ಕ್ಕೆ ಅಂದರೆ ಶುಕ್ರವಾರ ನಡೆಸಬೇಕೆಂದಿರುವ ಕರ್ನಾಟಕ ಬಂದನ್ನು ರೈತ ಸಂಘಟನೆಗಳು ವಾಪಸ್ ಪಡೆದಿವೆ. 25 ಕ್ಕೆ ಕರ್ನಾಟಕ ಬಂದ್ ನಡೆಸಬೇಕು, ಬೇಡ ಎನ್ನುವುದರ ಬಗ್ಗೆ ಸ್ವಲ್ಪ ಗೊಂದಲ ಉಂಟಾಗಿ ಕೊನೆಗೆ 28 ಕ್ಕೆ ನಡೆಸಲು ಮುಂದಾಗಿವೆ. 

ಸುಗ್ರೀವಾಜ್ಞೆ ಹಿಂಪಡೆಯಿರಿ, ಇಲ್ಲ ಉಗ್ರ ಹೋರಾಟ ಎದುರಿಸಿ: ಸರ್ಕಾರಕ್ಕೆ ರೈತರ ವಾರ್ನಿಂಗ್

ರಾಜ್ಯ ರೈತ ಸೇನೆ ಸಂಘಟನೆ, ಹಸಿರು ಸೇನೆ ಸೇರಿದಂತೆ 9 ರೈತ ಸಂಘಟನೆಗಳು  ಸೋಮವಾರ ಅಂದರೆ ಸೆ. 28 ಕ್ಕೆ ಬಂದ್ ನಡೆಸಲು ಮುಂದಾಗಿವೆ. 25 ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟನೆ ನಡೆಸಲಾಗುತ್ತದೆ. 28 ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. 

'ಬಂದ್‌ಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ಬೇಕಾಗಿರುವುದರಿಂದ 25 ಕ್ಕೆ ಅದು ಆಗುವುದಿಲ್ಲ. ಹಾಗಾಗಿ 28 ಕ್ಕೆ ಮಾಡಲು ನಿರ್ಧರಿಸಿದ್ದೇವೆ' ಎಂದು ರೈತ ಸೇನೆ ಸಂಘಟನೆ ಅಧ್ಯಕ್ಷ ನಾಗೇಂದ್ರ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.