Asianet Suvarna News Asianet Suvarna News

ಏಷ್ಯಾನೆಟ್ ಸುವರ್ಣ ನ್ಯೂಸ್‌ ಬಿಗ್3 ವರದಿಗೆ ENBA ಪ್ರಶಸ್ತಿ ಗರಿ!

ಏಷ್ಯಾನೆಟ್ ಸುವರ್ಣನ್ಯೂಸ್‌‌ನ ಬಿಗ್‌3 ವರದಿಗೆ ENBA ಪ್ರಶಸ್ತಿ ಲಭಿಸಿದೆ. ಈ ಮೂಲಕ ಜನರ ಸಮಸ್ಯೆಗೆ ಧ್ವನಿಯಾಗುವ ಮೂಲಕ ಸಮಾಜದಲ್ಲಿ ಹೊಸ ಕ್ರಾಂತಿ ಮಾಡಿರುವ ಬಿಗ್3 ಇದೀಗ ಪ್ರಶಸ್ತಿಯ ಹಿರಿಮೆಗೆ ಪಾತ್ರವಾಗಿದೆ.

ಸಾಮಾಜಿಕ ಕಳಕಳಿಯಳ್ಳ ಬಿಗ್3 ವರದಿದೆ ಪ್ರತಿಷ್ಠಿತ ENBA ಪ್ರಶಸ್ತಿ ಒಲಿದಿದೆ.  ಜಿಲ್ಲಾಮಟ್ಟ, ತಾಲೂಕು, ಹಳ್ಳಿಗಳ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ರಮಕ್ಕೆ ಇದೀಗ ಎನ್ಬಾ ಗೋಲ್ಡನ್ ಅವಾರ್ಡ್ ಲಭಿಸಿದೆ. ಶಾಲಾ ಕಟ್ಟಡಗಳ ದುರಸ್ಥಿ, ಅರ್ಧಂಬರ್ಧ ಆಗಿರೋ ಸರ್ಕಾರಿ ಕ ಟ್ಟಡ, ಅನಾರೋಗ್ಯದಲ್ಲಿ ಇದ್ದವರಿಗೆ ಜನರಿಂದ ಸಹಾಯ, ಡಾಕ್ಟರ್, ಇಂಜಿನಿಯರ್ ಪ್ರತಿಭಾನ್ವಿತರಿಗೆ ಆರ್ಥಿಕ ನೆರವು ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮದ ಮೂಲಕ ಜನರ ಮನಸ್ಸಿನಲ್ಲಿ ಅಚ್ಚೊತ್ತಿರುವ ಕಾರ್ಯಕ್ರಮಕ್ಕೆ ಇದೀಗ ಪ್ರಶಸ್ತಿಯ ಹಿರಿಮೆ ಸಂದಿದೆ.
 

Video Top Stories