ಐಪಿಎಸ್‌-ಐಎಎಸ್‌ ಬೀದಿಜಗಳಕ್ಕೆ 'ವೈಯಕ್ತಿಕ' ಕಾರಣ, ಗಂಡನ ಅಫೀಸ್‌ನಲ್ಲಿ ಹೆಂಡ್ತಿ ಬೇಹುಗಾರಿಕೆ!

ರೂಪಾ ಹಾಗೂ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟಕ್ಕೆ ವೈಯಕ್ತಿಕ ವಿಚಾರ ಕಾರಣ ಎನ್ನುವುದು ಗೊತ್ತಾಗಿದೆ. ಈ ನಡುವೆ ಡಿ ರೂಪಾ ಅವರು ತಮ್ಮ ಪರಿ ಮನೀಷ್‌ ಮೌದ್ಗಿಲ್‌ ಅವರ ಕಚೇರಿಯನ್ನು ತಮ್ಮ ಬೇಹುಗಾರರನ್ನು ಇಟ್ಟುಕೊಂಡಿದ್ದರು ಅನ್ನೋ ಅನುಮಾನವೂ ಕಾಡಲು ಆರಂಭಿಸಿದೆ.

First Published Feb 22, 2023, 11:18 PM IST | Last Updated Feb 22, 2023, 11:18 PM IST

ಬೆಂಗಳೂರು (ಫೆ.22):ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳನ್ನು ಸ್ಥಳ ನಿಯೋಜಿಸದೇ ವರ್ಗಾವಣೆ ಮಾಡಿದ ಬಳಿಕವೂ, ರೂಪಾ ಹಾಗೂ ರೋಹಿಣಿ ಸಿಂಧೂರಿ ಅವರ ನಡುವಿನ ವಾರ್‌ ಕೊನೆಯಾಗುತ್ತಿಲ್ಲ. ರೋಹಿಣಿ ಸಿಂಧೂರಿ ತಮ್ಮ ಕುರಿತಾದ ಸುದ್ದಿ ಪ್ರಸಾರಕ್ಕೆ ತಡೆ ಕೋರಿ ಸಿಟಿ ಸಿವಿಲ್‌ ಕೋರ್ಟ್‌ಗೆ ಮೊರೆ ಹೋಗಿದ್ದರೆ, ಇನ್ನೊಂದೆಡೆ ರೂಪಾ ಕೂಡ ಬೆನ್ನುಬೆನ್ನಿಗೆ ಒಂದರಂತೆ ಆರೋಪ ಮಾಡುತ್ತಿದ್ದಾರೆ.

ಇಬ್ಬರು ಉನ್ನತ ಅಧಿಕಾರಿಗಳ ನಡುವಿನ ಬೀದಿ ಜಗಳದಲ್ಲಿ ಇಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರ ಪ್ರವೇಶವಾಗಿದೆ. ರೂಪಾ ಅವರ 25 ನಿಮಿಷಗಳ ಆಡಿಯೋ ಎನ್ನಲಾದ ದಾಖಲೆಯಲ್ಲಿ ಅವರು, ಗಂಗರಾಜು ವಿರುದ್ಧ ಆಕ್ರೋಶ ಹೊರಹಾಕಿದ್ದು ದಾಖಲಾಗಿದೆ. 'ನನ್ನ ಮೇಲೆ ರೂಪಾ ಧಮ್ಕಿ ಹಾಕಿದ್ದಾರೆ. ನನಗೆ ಜೀವ ಭಯ ಇದೆ' ಎಂದು ಗಂಗರಾಜು ಮಾಧ್ಯಮದ ಮುಂದೆ ಹೇಳಿದ್ದಾರೆ.

ಐಪಿಎಸ್‌ ರೂಪಾಗೆ ಲೀಗಲ್‌ ನೋಟಿಸ್‌ ನೀಡಿದ ರೋಹಿಣಿ ಸಿಂಧೂರಿ!

ರೋಹಿಣಿ ಸಿಂಧೂರಿ ಅವರ ಮೊಬೈಲ್‌ ಹ್ಯಾಕ್‌ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರೋಹಿಣಿ-ರೂಪಾ ನಡುವಿನ ಗಲಾಟೆಯಲ್ಲಿ ರೂಪಾ ಅವರಿಗೆ ಚಿತ್ರಗಳು ಸಿಕ್ಕಿದ್ದೇಗೆ ಎನ್ನುವ ಕುತೂಹಲವೂ ಅರಂಭವಾಗಿದೆ.

Video Top Stories