ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ: ಹೊಸ ವರ್ಷಕ್ಕೆ ಬರುತ್ತಾ ಮತ್ತಷ್ಟು ಟಫ್ ರೂಲ್ಸ್?
ಕೇರಳ ಸೇರಿದಂತೆ ದೇಶಾದ್ಯಂತ ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ
ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ
ತಾಂತ್ರಿಕ ಸಲಹಾ ಸಮಿತಿ,ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ
ಕೇರಳ ಸೇರಿದಂತೆ ದೇಶಾದ್ಯಂತ ಕೊರೊನಾ(Corona) ಪ್ರಕರಣ ಜಾಸ್ತಿಆಗ್ತಿದೆ. ಅದರಲ್ಲೂ ಸಕ್ರೀಯ ಕೇಸ್‌ನಲ್ಲಿ ದೇಶದಲ್ಲಿ ಕರ್ನಾಟಕ(Karnataka) ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಇವತ್ತು ಸಿಎಂ ಸಿದ್ದರಾಮಯ್ಯ(Siddaramaiah) ತಾಂತ್ರಿಕ ಸಲಹಾ ಸಮಿತಿ,ಆರೋಗ್ಯಾಧಿಕಾರಿಗಳ ಜೊತೆ ಮಹತ್ವದ ಸಭೆ(Meeting) ನಡೆಸಲಿದ್ದಾರೆ. ಟೆಸ್ಟಿಂಗ್,ಆಸ್ಪತ್ರೆ ಬೆಡ್,ಔಷಧಿಗಳು ಸೇರಿದಂತೆ ಕೊರೊನಾ ಕಟ್ಟಿಹಾಕುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದರ ಜೊತೆ ಹೊಸ ವರ್ಷಕ್ಕೆ(New Year)ಟಫ್ ರೂಲ್ಸ್ ಜಾರಿ ಮಾಡೋ ಸಾಧ್ಯತೆ ಇದೆ. ರೂಪಾಂತರಿ JN.1 ತಡೆಗಟ್ಟುವ ಸಂಬಂಧ ಮಹತ್ವದ ಚರ್ಚೆ ನಡೆಯಲಿದ್ದು, ಈಗಾಗಲೇ ಮಾರ್ಗಸೂಚಿಯನ್ನ ರಾಜ್ಯ ಸರ್ಕಾರ ಹೊರಡಿಸಿದೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಕೇರಳ, ಮಹಾರಾಷ್ಟ್ರ, ಗೋವಾದಲ್ಲಿ ಪ್ರಕರಣ ಹೆಚ್ಚಳ ಹಿನ್ನೆಲೆ ಗಡಿ ಜಿಲ್ಲೆಯಲ್ಲಿ ಟೆಸ್ಟ್ ಹೆಚ್ಚಳಕ್ಕೆ ಸೂಚನೆ ನೀಡಲಾಗಿದೆ.
ಇದನ್ನೂ ವೀಕ್ಷಿಸಿ: ಮನೋರಂಜನ್-ಸಾಯಿಕೃಷ್ಣ ಲಿಂಕ್..? ಮೈಸೂರಿನ ಬಳಿಕ ಬಾಗಲಕೋಟೆಗೂ ಹಬ್ಬಿದ ದಾಳಿ ನಂಟು !