Furniture Expo: ಒಂದೇ ಸೂರಿನಡಿ ಸಿಗಲಿದೆ ಆಕರ್ಷಕ ವಿನ್ಯಾಸ, ವೈವಿಧ್ಯಮಯ ವಸ್ತುಗಳು

ಉತ್ಕೃಷ್ಟದರ್ಜೆಯ ದಿನ ಬಳಕೆ ವಸ್ತುಗಳು, ಪೀಠೋಪಕರಣ ಖರೀದಿಗೆ ತಲಘಟ್ಟಪುರ ಮತ್ತು ಸುತ್ತಮುತ್ತಲ ಪ್ರದೇಶದ ಜನತೆಗೆ ಇಲ್ಲಿದೆ ಸುವರ್ಣಾವಕಾಶ. ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ‘ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ಗೆ ಚಾಲನೆ ದೊರೆತಿದೆ.

First Published Feb 26, 2022, 10:51 AM IST | Last Updated Feb 26, 2022, 11:21 AM IST

ಬೆಂಗಳೂರು (ಫೆ. 26): ಉತ್ಕೃಷ್ಟದರ್ಜೆಯ ದಿನ ಬಳಕೆ ವಸ್ತುಗಳು, ಪೀಠೋಪಕರಣ ಖರೀದಿಗೆ ತಲಘಟ್ಟಪುರ ಮತ್ತು ಸುತ್ತಮುತ್ತಲ ಪ್ರದೇಶದ ಜನತೆಗೆ ಇಲ್ಲಿದೆ ಸುವರ್ಣಾವಕಾಶ. ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ‘ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ಗೆ ಚಾಲನೆ ದೊರೆತಿದೆ.

Russia Ukraine Crisis: ಕನ್ನಡಿಗರ ಸುರಕ್ಷತೆ ಬಗ್ಗೆ ವಿದೇಶಾಂಗ ಸಚಿವರ ಜೊತೆ ರಾಜೀವ್ ಚಂದ್ರಶೇಖರ್ ಮಾತುಕತೆ!

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ಕನಕಪುರ ರಸ್ತೆಯ ತಲಘಟ್ಟಪುರ ಮೆಟ್ರೋ ನಿಲ್ದಾಣ ಸಮೀಪದ ವಾಜರಹಳ್ಳಿಯ ಬಿಆರ್‌ಎಸ್‌ ಗ್ರ್ಯಾಂಡೆಯರ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ 8ನೇ ‘ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ಗೆ ‘ಬೈಟು ಲವ್‌’ ಚಿತ್ರತಂಡ ವಿಧ್ಯುಕ್ತವಾಗಿ ಚಾಲನೆ ನೀಡಿತು.

ಫೆ.28ರ ವರೆಗೆ ಮೇಳ ನಡೆಯಲಿದ್ದು ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆಯವರೆಗೂ ಮೇಳಕ್ಕೆ ಭೇಟಿ ನೀಡಲು ಅವಕಾಶವಿದ್ದು ಉಚಿತ ಪ್ರವೇಶವಿದೆ. ಎಲ್ಲ ಪ್ರಮುಖ ಕಾರ್ಡ್‌ಗಳನ್ನು ಸ್ವೀಕರಿಸಲಾಗುವುದು. ಪಾರ್ಕಿಂಗ್‌ ಕಿರಿಕಿರಿಯಿಲ್ಲ. ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ವಾರಾಂತ್ಯವಾಗಿರುವುದರಿಂದ ಕುಟುಂಬ ಸಮೇತ ತೆರಳಿ ಶಾಪಿಂಗ್‌ ಮಾಡಲು ಒಳ್ಳೆಯ ಅವಕಾಶವಿದೆ.