Russia Ukraine Crisis: ಕನ್ನಡಿಗರ ಸುರಕ್ಷತೆ ಬಗ್ಗೆ ವಿದೇಶಾಂಗ ಸಚಿವರ ಜೊತೆ ರಾಜೀವ್ ಚಂದ್ರಶೇಖರ್ ಮಾತುಕತೆ!

ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು

ಸುರಕ್ಷಿತ ನಿರ್ಗಮನಕ್ಕೆ ಭಾರತ ಸರ್ಕಾರದಿಂದ ವ್ಯವಸ್ಥೆ

ಈ ಕುರಿತಾಗಿ ವಿದೇಶಾಂಗ ಸಚಿವರೊಂದಿಗೆ ಸಂಸದ ರಾಜೀವ್ ಚಂದ್ರಶೇಖರ್ ಮಾತುಕತೆ

First Published Feb 25, 2022, 6:15 PM IST | Last Updated Feb 25, 2022, 6:15 PM IST

ಬೆಂಗಳೂರು (ಫೆ. 25): ಯುದ್ಧಪೀಡಿತ ಉಕ್ರೇನ್ ನಲ್ಲಿ (Ukraine) ಸಿಲುಕಿಹಾಕಿಕೊಂಡಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ (Rajeev Chandrasekhar), ಶುಕ್ರವಾರ ವಿದೇಶಾಂಗ ಸಚಿವರೊಂದಿಗೆ (External Affairs Minister) ಮಾತುಕತೆ ನಡೆಸಿದರು. ಉಕ್ರೇನ್ ನಲ್ಲಿ ಈಗಾಗಲೇ ಸಾಕಷ್ಟು ಕರ್ನಾಟಕದ ವಿದ್ಯಾರ್ಥಿಗಳು ಸಿಲುಕಿ ಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ತವರಿಗೆ ಕರೆತರುವಂತೆ ವಿದೇಶಾಂಗ ಸಚಿವರಿಗೆ ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಮನವಿ ಮಾಡಿದರು.

ವಿದೇಶಾಂಗ ಸಚಿವರು ಕೂಡ ಈ ಬಗ್ಗೆ ಭರವಸೆ ನೀಡಿದ್ದು, ಈ ವಿಚಾರವನ್ನು ರಾಜೀವ್ ಚಂದ್ರಶೇಖರ್ ಟ್ವಿಟರ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಹುತೇಕ ಉಕ್ರೇನ್ ನ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿರುವ ರಷ್ಯಾದ ಸೇನಾಪಡೆಗಳು ಹಿಂಜರಿಯುವ ಲಕ್ಷಣ ಕಾಣುತ್ತಿಲ್ಲ. ಅದರ ಬೆನ್ನಲ್ಲಿಯೇ ಕೀವ್, ಕಾರ್ಕೀವ್ ಸೇರಿ ಹಲವು ಪ್ರಾಂತ್ಯಗಳಲ್ಲಿರುವ ಕನ್ನಡಿಗರಿಗೆ ಆತಂಕ ಶುರುವಾಗಿದೆ.

Russia Ukraine War: ಉಕ್ರೇನ್‌ನಲ್ಲಿರುವ ಕನ್ನಡಿಗರನ್ನು ಸೇಫ್‌ ಆಗಿ ಕರೆತರಬೇಕು: ಸಿದ್ದರಾಮಯ್ಯ
ಈಗಾಗಲೇ ಉಕ್ರೇನ್ ನ ಅಧ್ಯಕ್ಷರು ರಷ್ಯಾದ ದಾಳಿಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಅದರೊಂದಿಗೆ ಭಾರತ ಸರ್ಕಾರ ಕೂಡ ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಆರಂಭಿಸಿದೆ.