Asianet Suvarna News Asianet Suvarna News

ಸುಷಾಂತ್ ಸಾವು: ಧೋನಿ-2 ಸಿನಿಮಾ ಇನ್ನು ಅಸಾಧ್ಯ..!

ಸುಷಾಂತ್ ಸಿಂಗ್ ಎನ್ನುವ ಪ್ರತಿಭೆ ಆ ಮಟ್ಟಿಗೆ ಅದ್ಭುತವಾಗಿ ಅಭಿನಯಿಸಿ ಮಿಂಚಿದ್ದರು. ಪ್ರತಿಯೊಂದು ಸನ್ನಿವೇಷವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಧೋನಿ ಪಾತ್ರಕ್ಕೆ ಜೀವ ತುಂಬಿದ್ದರು. ಧೋನಿ ಭಾಗ-2 ಸಿನೆಮಾ ನೋಡಬೇಕೆಂದಿದ್ದ ಅಸಂಖ್ಯಾತ ಅಭಿಮಾನಿಗಳಿಗೆ ಸುಷಾಂತ್ ಆತ್ಮಹತ್ಯೆಯ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.

ಬೆಂಗಳೂರು(ಜೂ.20): MS ಧೋನಿ ಅನ್ ಟೋಲ್ಡ್‌ ಸ್ಟೋರಿ ನೋಡಿ ಎಂಜಾಯ್ ಮಾಡದೇ ಇರುವವರೇ ಇಲ್ಲವೇನೋ. ಫಿಲ್ಮ್ ಥಿಯೇಟರ್‌ಗೆ ಹೋಗುವ ಮುನ್ನ ಧೋನಿ ಅಭಿಮಾನಿಗಳಾಗಿದ್ದವರು, ಫಿಲ್ಮ್ ನೋಡಿ ಹೊರಬರುವಾಗ ಸುಷಾಂತ್ ಸಿಂಗ್ ರಜಪೂತ್ ಅಭಿಮಾನಿಗಳಾಗಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು.

ಹೌದು, ಸುಷಾಂತ್ ಸಿಂಗ್ ಎನ್ನುವ ಪ್ರತಿಭೆ ಆ ಮಟ್ಟಿಗೆ ಅದ್ಭುತವಾಗಿ ಅಭಿನಯಿಸಿ ಮಿಂಚಿದ್ದರು. ಪ್ರತಿಯೊಂದು ಸನ್ನಿವೇಷವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಧೋನಿ ಪಾತ್ರಕ್ಕೆ ಜೀವ ತುಂಬಿದ್ದರು. ಧೋನಿ ಭಾಗ-2 ಸಿನೆಮಾ ನೋಡಬೇಕೆಂದಿದ್ದ ಅಸಂಖ್ಯಾತ ಅಭಿಮಾನಿಗಳಿಗೆ ಸುಷಾಂತ್ ಆತ್ಮಹತ್ಯೆಯ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.

ಸುಶಾಂತ್ ಆತ್ಮಹತ್ಯೆ: ಬಾಲಿವುಡ್‌ನ ಫೇಮಸ್ ಪ್ರೊಡಕ್ಷನ್‌ ಹೌಸ್‌ಗೆ ಪೊಲೀಸ್ ಲೆಟರ್

ಧೋನಿ ಸ್ಟೋರಿ ಹೇಳಿದ ಸುಷಾಂತ್ ತನ್ನದೇ ಸ್ಟೋರಿಯನ್ನು ಹೇಳದೇ ಹೋಗಿಬಿಟ್ಟ. ಧೋನಿ ಸಿನೆಮಾ ಯಶಸ್ಸಿನ ಬಳಿಕ ಧೋನಿ 2 ಚಿತ್ರ ನಿರ್ಮಿಸಲು ಧೋನಿ ಸ್ನೇಹಿತ ಹಾಗೂ ಚಿತ್ರದ ಸಹ ನಿರ್ಮಾಪಕ ಅರುಣ್ ಪಾಂಡೆ ನಿರ್ಧರಿಸಿದ್ದರು. 2011ರ ವಿಶ್ವಕಪ್ ನಂತರದಿಂದ ಹಿಡಿದು ನಿವೃತ್ತಿಯವರೆಗಿನ ಕ್ರಿಕೆಟ್ ಬದುಕನ್ನು ತೆರೆ ಮೇಲೆ ತರಲು ಅರುಣ್ ನಿರ್ಧರಿಸಿದ್ದರು. ಆದರೆ ಸುಷಾಂತ್ ಸಾವು ಇವೆಲ್ಲ ಆಸೆಗೆ ತಣ್ಣೀರೆರಚಿದ್ದು, ಸುಷಾಂತ್ ಇಲ್ಲದೇ ಧೋನಿ 2 ಸಾಧ್ಯವಿಲ್ಲ ಎಂದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories