Asianet Suvarna News Asianet Suvarna News

ದೊಡ್ಮನೆಯಿಂದ ಯಾಕೆ ಹೊರಬಂದಿದ್ದು? ಪುನೀತ್ ಆಪ್ತ ಚಲಪತಿ ಮಾತು

ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ಸದಾ ಇರುತ್ತಿದ್ದ ಅಂಗರಕ್ಷಕ ಚಲಪತಿಯವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ' ಯಜಮಾನರ ಜೊತೆ ಕಳೆದಿದ್ದು ನಮ್ಮ ಪುಣ್ಯ. ಅವರು ಆಚೆ ಹೋಗಿದ್ದಾರೆ, ವಾಪಸ್ ಬರ್ತಾರೆ ಅನ್ನೋ ನಂಬಿಕೆಯಲ್ಲೇ ಇನ್ನೂ ಇದ್ದೇವೆ. ದೇವರಾಗಿ ಬಂದು, ದೇವರ ಹಾಗೆ ಇದ್ದು, ಹೊರಟು ಹೋದರು' ಎಂದು ಚಲಪತಿ ಭಾವುಕರಾದರು. 
 

Jun 23, 2022, 1:52 PM IST

ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಜೊತೆಗೆ ಸದಾ ಇರುತ್ತಿದ್ದ ಅಂಗರಕ್ಷಕ ಚಲಪತಿಯವರು (Chalapathi) ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ' ಯಜಮಾನರ ಜೊತೆ ಕಳೆದಿದ್ದು ನಮ್ಮ ಪುಣ್ಯ. ಅವರು ಆಚೆ ಹೋಗಿದ್ದಾರೆ, ವಾಪಸ್ ಬರ್ತಾರೆ ಅನ್ನೋ ನಂಬಿಕೆಯಲ್ಲೇ ಇನ್ನೂ ಇದ್ದೇವೆ. ದೇವರಾಗಿ ಬಂದು, ದೇವರ ಹಾಗೆ ಇದ್ದು, ಹೊರಟು ಹೋದರು' ಎಂದು ಚಲಪತಿ ಭಾವುಕರಾದರು. 

'ನೀವ್ ಹಂಗ್ ಮಾಡ್ಬೇಡಿ ಅಣ್ಣಾ, ಜನ ನಮ್ಗೆ ಹಿಡ್ಕೋತಾರೆ, ಪ್ಲೀಸ್ ಹಾಗ್ ಮಾಡ್ಬೇಡಿ'

'ಅಶ್ವಿನಿ ಅಕ್ಕರಿಗೆ ರಿಕ್ವೆಸ್ಟ್ ಮಾಡಿ, ದೊಡ್ಮನೆಯಿಂದ ಹೊರ ಬಂದಿದ್ದೇನೆ. ಸ್ವಲ್ಪ ಬೇರೆ ಕೆಲಸಗಳಿವೆ, ಅದಕ್ಕಾಗಿ ಹೊರ ಬಂದಿದ್ದೇನೆ. ಆದರೆ ದೊಡ್ಮನೆ ಜೊತೆ ಒಡನಾಟ ಇದ್ದೇ ಇರುತ್ತದೆ' ಎಂದು ಚಲಪತಿ ಹೇಳಿದರು. 

Video Top Stories