Asianet Suvarna News Asianet Suvarna News

2ನೇ ವಾರವೂ 'ಒಂದು ಸರಳ ಪ್ರೇಮಕಥೆ' ಸಕ್ಸಸ್‌ಫುಲ್ ಪ್ರದರ್ಶನ: ಪ್ರೇಮಿಗಳ ದಿನಕ್ಕೆ ಚಿತ್ರತಂಡದಿಂದ ಭರ್ಜರಿ ಆಫರ್!

ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ನಾಯಕನಾಗಿ ನಟಿಸಿರೋ ಡೈರೆಕ್ಟರ್ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರೋ ಒಂದು ಸರಳ ಪ್ರೇಮಕಥೆ ಸಿನಿಮಾ ಈಗ ಸ್ಯಾಂಡಲ್ವುಡ್ನ ಟಾಕ್ ಆಫ್ ದಿನ ಮ್ಯಾಟರ್ ಆಗಿದೆ. ಸಾಮಾನ್ಯವಾಗಿ ವೀಕ್ ಎಂಡ್ ಹೊರತುಪಡಿಸಿದ್ರೆ ವೀಕ್ ಡೇಸ್ನಲ್ಲಿ ಚಿತ್ರ ಮಂದಿರಗಳಲ್ಲೂ ಹೌಸ್ ಫುಲ್ ಆಗೋದು ಕಡಿಮೆ. 
 

ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ನಾಯಕನಾಗಿ ನಟಿಸಿರೋ ಡೈರೆಕ್ಟರ್ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರೋ ಒಂದು ಸರಳ ಪ್ರೇಮಕಥೆ ಸಿನಿಮಾ ಈಗ ಸ್ಯಾಂಡಲ್ವುಡ್ನ ಟಾಕ್ ಆಫ್ ದಿನ ಮ್ಯಾಟರ್ ಆಗಿದೆ. ಸಾಮಾನ್ಯವಾಗಿ ವೀಕ್ ಎಂಡ್ ಹೊರತುಪಡಿಸಿದ್ರೆ ವೀಕ್ ಡೇಸ್ನಲ್ಲಿ ಚಿತ್ರ ಮಂದಿರಗಳಲ್ಲೂ ಹೌಸ್ ಫುಲ್ ಆಗೋದು ಕಡಿಮೆ. ಆದ್ರೆ ಒಂದು ಸರಳ ಪ್ರೇಮಕಥೆ ಸಿನಿಮಾ ವಾರದ ಮೊದಲ ದಿನ ಸೋಮವಾರ ಮಂಗಳವಾರವೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ಬುಕ್ಕಿಂಗ್ನಲ್ಲಿ 70 ಪರ್ಸೆಂಟ್ ಹೆಚ್ಚಿದೆ. ಹೀಗಾಗಿ ಚಿತ್ರತಂಡ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಗೆ ಅಂತ ಶೋ ಹಾಕಿ ಸಿನಿಮಾ ತೋರಿಸಿದೆ. ‘ಒಂದು ಸರಳ ಪ್ರೇಮಕಥೆ’ ಪ್ರೇಮಿಗಳ ದಿನ ಸಂದರ್ಭದಲ್ಲೇ ರಿಲೀಸ್ ಆಗಿದೆ. ಹೀಗಾಗಿ ವ್ಯಾಲೆಂಟೈನ್ಸ್ ಡೇ ದಿನ ಅಂದ್ರೆ ನಾಳೆ ಚಿತ್ರಮಂದಿರಗಳಲ್ಲಿ ಪ್ರೇಮಿಗಳಿಗಾಗೆ  ಒಂದು ಆಫರ್ ಕೊಟ್ಟಿದ್ದಾರೆ. ಹುಡುಗ ಒಂದು ಟಿಕೆಟ್ ಖರೀದಿಸಿದ್ರೆ ಹುಡುಗಿಗೆ ಟಿಕೆಟ್ ಫ್ರೀ. ಹುಡುಗಿ ಟಿಕೆಟ್ ಖರೀಸಿದರೆ ಹುಡುಗನಿಗೆ ಫ್ರೀ. ಫೆಬ್ರವರಿ 14ರಂದು ಮಾತ್ರ ಈ ಆಫರ್ ಇರಲಿದೆ.