Asianet Suvarna News Asianet Suvarna News

ಮಂತ್ರಾಲಯಕ್ಕೆ ಬಂದ್ರೆ ಅಪ್ಪಾಜಿ ನೆನಪಿಗೆ ಬರುತ್ತಾರೆ: ಶಿವರಾಜ್‌ ಕುಮಾರ್‌

ರಾಯರ ಕುರಿತು ಯಾವುದಾದರು ಸಿನಿಮಾಗಳು ಬಂದರೆ ನಾನು ಮಾಡಲು ಸಿದ್ಧನಿದ್ದೇನೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ನಟ ಶಿವಣ್ಣ ದಂಪತಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಈ ವೇಳೆ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ವೇದ ನನ್ನ 125ನೇ ಸಿನಿಮಾವಾಗಿದ್ದು, ದೇವರ ಆಶೀರ್ವಾದದಿಂದ ಸಿನಿಮಾ ಇಂಡಸ್ಟ್ರಿಗೆ ಬಂದು 36 ವರ್ಷಗಳಾಗಿವೆ. 125ನೇ ಸಿನಿಮಾ ಗೀತಾ ಶಿವರಾಜ್‌ ಕುಮಾರ್‌ ಬ್ಯಾನರ್‌ ಅಡಿಯಲ್ಲಿ ಬರುತ್ತಿದೆ. ಇದು ಹರ್ಷಾ ಡೈರೆಕ್ಷನ್‌ ಸಿನಿಮಾ ವಾಗಿದ್ದು ವಿಶೇಷ ಆಗಿದೆ ಎಂದ್ರು. ಹರ್ಷನ ಜೊತೆ ಇದು ನನ್ನ 4 ನೇ ಸಿನಿಮಾ, ವೇದದಲ್ಲಿ ಒಂದು ವಿಷೇಶತೆ ಇದೆ. ಎಲ್ಲರಿಗೂ ಇಷ್ಟವಾಗುವಂತ ಸಿನಿಮಾ. ಹೆಣ್ಣು ಮಕ್ಕಳಿಗೆ ತುಂಬಾ ಹತ್ತಿರವಾದ ಸಿನಿಮಾ. ವೇದ ಸಿನಿಮಾ ಒಂದು ಭಾವನೆಗಳ ಸಮೂಹವಾಗಿದೆ. ಪ್ರೀತಿ, ಬಾಳು, ಖುಷಿ, ನಂಬಿಕೆ ಈ ನಾಲ್ಕು ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ. ಹಾಗೇ  ಮಂತ್ರಾಲಯ ಮಠಕ್ಕೆ ಬಂದ್ರೆ ರಾಘವೇಂದ್ರ ಸ್ವಾಮಿ ಮತ್ತು ಅಪ್ಪಾಜಿ ನೆನಪಿಗೆ ಬರುತ್ತಾರೆ    ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.