Asianet Suvarna News

ಗೂಗಲ್‌ಗ್ಯಾಕೆ ಕನ್ನಡದ ಮೇಲೆ ಸಿಟ್ಟು: ಇದೀಗ ಅಣ್ಣಾವ್ರಿಗೆ ಅವಮಾನ

Jun 23, 2021, 4:56 PM IST

ಮಾಧವನ್ ಹಾಗೂ ವಿಜಯ್ ಸೇತುಪತಿ ನಟಿಸಿದ್ದ ತಮಿಳಿನ ವಿಕ್ರಮ್ ವೇದಾ ಸಿನಿಮಾದಲ್ಲಿ ನಟಿಸಿರುವ ರಾಜ್‌ಕುಮಾರ್ ಎಂಬ ನಟನ ಬದಲಾಗಿ ಕನ್ನಡದ ವರನಟ ಡಾ| ರಾಜ್‌ಕುಮಾರ್ ಫೋಟೋವನ್ನು ಗೂಗಲ್ ತೋರಿಸುತ್ತಿದೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಚಿತ್ರದಲ್ಲಿ ರಾಜ್‌ಕುಮಾರ್‌ ನಟಿಸಿರುವ ಪಾತ್ರದ ಹೆಸರು ಹಾಫ್‌ ಬಾಯ್ಲ್ಡ್‌. ಹೀಗಾಗಿ ಹೀಗಾಗಿ ಗೂಗಲ್ ವೆಬ್ ಸರ್ಚ್‌ನಲ್ಲಿ ಕಾಸ್ಟ್‌ ಆಫ್‌ ವಿಕ್ರಮ್ ವೇದಾ ಹಾಫ್‌ ಬಾಯ್ಲ್ಡ್‌ ಎಂದು ಟೈಪ್ ಮಾಡಿದರೆ, ಚಿತ್ರದ ಲ್ಯಾಂಡಿಂಗ್ ಪೇಜ್‌ನಲ್ಲಿ ಕನ್ನಡದ ವರನಟ ರಾಜ್‌ಕುಮಾರ್ ಅವರ ಫೋಟೋ ತೋರಿಸುತ್ತಿದೆ.

ಸಿನಿಮಾ ಹಂಗಾಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ