Asianet Suvarna News Asianet Suvarna News

James 2022: ಐದು ದಿನ ಮೊದಲೇ ಸೋಲ್ಡೌಟ್ ಆಯ್ತು ಅಪ್ಪು ಚಿತ್ರದ ಟಿಕೆಟ್!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್  ನಟನೆಯ ಕೊನೆಯ ಸಿನಿಮಾ 'ಜೇಮ್ಸ್' ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ದೇಶಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಕರ್ನಾಟಕದಲ್ಲಂತೂ ಭರ್ಜರಿ ಪ್ರಚಾರ ಸಿಗುತ್ತಿದೆ.

First Published Mar 14, 2022, 12:02 PM IST | Last Updated Mar 14, 2022, 12:02 PM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ಕೊನೆಯ ಸಿನಿಮಾ 'ಜೇಮ್ಸ್' (James) ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ದೇಶಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಕರ್ನಾಟಕದಲ್ಲಂತೂ (Karnataka) ಭರ್ಜರಿ ಪ್ರಚಾರ ಸಿಗುತ್ತಿದೆ. ನಾಲ್ಕು ದಿನಗಳ ಮೊದಲೇ ಟಿಕೆಟ್ ಬುಕ್ಕಿಂಗ್ (Ticket Booking) ಶುರು ಮಾಡಿದೆ ಚಿತ್ರತಂಡ. ವಿಶೇಷವಾಗಿ ಐದು ದಿನ ಮೊದಲೇ ಚಿತ್ರದ ಟಿಕೆಟ್ ಸೋಲ್ಟೌಟ್ ಆಗಿದೆ. ಹಲವು ಕಡೆ ಬೆಳಗ್ಗೆ ನಾಲ್ಕರಿಂದಲೇ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಬಾಕ್ಸ್ ಆಫೀಸ್ ರಿಪೋರ್ಟ್ ಪ್ರಕಾರ ಮಾ.17 ರಂದು ಬೆಳಗ್ಗೆ 6 ಗಂಟೆಗೆ 200 ಶೋಗಳು'ಜೇಮ್ಸ್'ಗಾಗಿ ಮೀಸಲಿಟ್ಟಿವೆ. ಅಷ್ಟೂ ಶೋಗಳ ಟಿಕೇಟ್ ಸೋಲ್ಡೌಟ್ ಆಗಿರುವುದು ವಿಶೇಷ. 

James 2022: ಅಪ್ಪು ಚಿತ್ರದ ಜಾತ್ರೆಗೆ ಜೋಶ್ ತುಂಬಿದ ಸಲಾಂ ಸೋಲ್ಜರ್ ಸಾಂಗ್!

ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು (Fans) ತುದಿಗಾಲಲ್ಲಿ ನಿಂತದ್ದು, ಬೆಳಗಿನ ಪ್ರದರ್ಶನಕ್ಕೆ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಬಹುತೇಕ ಸ್ಕ್ರೀನ್ ಗಳನ್ನು 'ಜೇಮ್ಸ್' ಪ್ರದರ್ಶನಕ್ಕಾಗಿಯೇ ಮೀಸಲಿಡಲಾಗಿದೆಯಂತೆ. ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ಇದಾಗಿದ್ದರಿಂದ, ಅವರಿಗೆ ಗೌರವ ಸಲ್ಲಿಸುವುದಕ್ಕಾಗಿಯೇ ಈ ವಾರ ಯಾವ ಭಾರೀ ಬಜೆಟ್ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಹಾಗಾಗಿ ರಾಜ್ಯದ ಶೇ.80ರಷ್ಟು ಚಿತ್ರಮಂದಿರಗಳಲ್ಲಿ 'ಜೇಮ್ಸ್' ತೆರೆ ಕಾಣುತ್ತಿದೆ. ಸಿನಿಮಾ ಬಿಡುಗಡೆಗೂ ನಾಲ್ಕು ದಿನಗಳ ಮುನ್ನ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ, ಒಂದು ವಾರದೊಳಗೆ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದರಲ್ಲಿ ಅಚ್ಚರಿ ಪಡಬೇಕಿಲ್ಲ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies