Asianet Suvarna News Asianet Suvarna News

James 2022: ಅಪ್ಪು ಚಿತ್ರದ ಜಾತ್ರೆಗೆ ಜೋಶ್ ತುಂಬಿದ ಸಲಾಂ ಸೋಲ್ಜರ್ ಸಾಂಗ್!

ಪುನೀತ್‌ ರಾಜ್‌ಕುಮಾರ್‌ ನಟನೆಯ 'ಸಲಾಂ ಸೋಲ್ಜರ್‌, ನೀನಿದ್ರೆ ಇಲ್ಲ ಡೇಂಜರ್‌' ಎಂಬ ಹಾಡನ್ನು ಸುದೀಪ್‌ ಬಿಡುಗಡೆ ಮಾಡಿದ್ದಾರೆ. 'ಪುನೀತ್‌ ರಾಜ್‌ಕುಮಾರ್‌ ನಟನೆಯ ಸಲಾಂ ಸೋಲ್ಜರ್‌ ಹಾಡನ್ನು ಬಿಡುಗಡೆ ಮಾಡುವ ಗೌರವ ಸಿಕ್ಕಿದ್ದಕ್ಕೆ ಋುಣಿ. 

First Published Mar 12, 2022, 10:41 AM IST | Last Updated Mar 12, 2022, 10:41 AM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನಟನೆಯ 'ಸಲಾಂ ಸೋಲ್ಜರ್‌, ನೀನಿದ್ರೆ ಇಲ್ಲ ಡೇಂಜರ್‌' ಎಂಬ ಹಾಡನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಬಿಡುಗಡೆ ಮಾಡಿದ್ದಾರೆ. 'ಪುನೀತ್‌ ರಾಜ್‌ಕುಮಾರ್‌ ನಟನೆಯ ಸಲಾಂ ಸೋಲ್ಜರ್‌ ಹಾಡನ್ನು ಬಿಡುಗಡೆ ಮಾಡುವ ಗೌರವ ಸಿಕ್ಕಿದ್ದಕ್ಕೆ ಋುಣಿ. ಚಿತ್ರತಂಡಕ್ಕೆ ಹಾಗೂ ಪುನೀತ್‌ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಶುಭ ಹಾರೈಕೆಗಳು' ಎಂದು ಸುದೀಪ್‌ ಶುಭ ಕೋರಿದ್ದಾರೆ. ಪಿಆರ್‌ಕೆ (PRK Audio) ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಹಾಡು ಕೆಲವೇ ಹೊತ್ತಲ್ಲಿ ಲಕ್ಷಾಂತರ ವೀಕ್ಷಣೆ ದಾಖಲಿಸಿ ವೈರಲ್‌ ಆಯ್ತು. 

James 2022: ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ಕ್ಲಬ್‌ಗೆ ಸೇರಲಿದೆಯಂತೆ ಪುನೀತ್ ಸಿನಿಮಾ!

ಚರಣ್‌ರಾಜ್‌ ಸಂಗೀತ ನಿರ್ದೇಶನದಲ್ಲಿ ಸಂಜಿತ್‌ ಹೆಗ್ಡೆ (Sanjith Hegde), ಚರಣ್‌ ರಾಜ್‌ (Charan Raj) ದನಿಯಲ್ಲಿ ಈ ಹಾಡು ಮೂಡಿಬಂದಿದೆ. ಚೇತನ್‌ ಕುಮಾರ್‌ (Chetan Kumar) ನಿರ್ದೇಶನದ ಈ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಜೊತೆಗೆ ಪ್ರಿಯಾ ಆನಂದ್‌ (Priya Anand) ನಾಯಕಿಯಾಗಿ ನಟಿಸಿದ್ದಾರೆ. ಕಿಶೋರ್‌ ಪತ್ತಿಕೊಂಡ (Kishore Pathikonda) ನಿರ್ಮಾಪಕರು. ಪುನೀತ್‌ ಜನ್ಮದಿನವಾದ ಮಾ.17ರಂದು ಚಿತ್ರ ಬಿಡುಗಡೆಯಾಗಲಿದೆ. ಸದ್ಯ  ಈಗಾಗಲೇ ಚಿತ್ರದ ಟಿಕೆಟ್​ ಬುಕಿಂಗ್​ ಓಪನ್​ ಆಗಿದ್ದು, ಟಿಕೆಟ್​ ಖರೀದಿಸಲು ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ ಮುಗಿ ಬಿದ್ದಿದ್ದಾರೆ.


ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies