Asianet Suvarna News Asianet Suvarna News

James 2022: ವಿದೇಶದಲ್ಲಿ ಹೇಗಿದೆ ಗೊತ್ತಾ ಅಪ್ಪು ಕೊನೆ ಚಿತ್ರದ ಕ್ರೇಜ್?

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಸಂಭ್ರಮಕ್ಕೆ ಇನ್ನೇನು ಒಂದೇ ದಿನ ಬಾಕಿ. ಮಾ.17 ಪುನೀತ್‌ ಅವರ ಹುಟ್ಟುಹಬ್ಬ. ಜೊತೆಗೆ ಅಪ್ಪು ನಟನೆಯ 'ಜೇಮ್ಸ್‌' ಸಿನಿಮಾ ಬಿಡುಗಡೆ. 

First Published Mar 16, 2022, 2:37 PM IST | Last Updated Mar 16, 2022, 2:37 PM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅಭಿಮಾನಿಗಳ (Fans) ಸಂಭ್ರಮಕ್ಕೆ ಇನ್ನೇನು ಒಂದೇ ದಿನ ಬಾಕಿ. ಮಾ.17 ಪುನೀತ್‌ ಅವರ ಹುಟ್ಟುಹಬ್ಬ (Birthday). ಜೊತೆಗೆ ಅಪ್ಪು ನಟನೆಯ 'ಜೇಮ್ಸ್‌' (James) ಸಿನಿಮಾ ಬಿಡುಗಡೆ. ಅಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿ ಐದು ಭಾಷೆಗಳಲ್ಲಿ, 4 ಸಾವಿರ ಚಿತ್ರಮಂದಿರಗಳಲ್ಲಿ ‘ಜೇಮ್ಸ್‌’ ಚಿತ್ರ ಬಿಡುಗಡೆಯಾಗಲಿದೆ. ಕೆನಡಾ, ಯೂರೋಪ್‌, ಯುಎಸ್‌ಎ, ಆಸ್ಪ್ರೇಲಿಯಾ ಸೇರಿ ಹೊರ ದೇಶಗಳ 72 ನಗರಗಳಲ್ಲಿ ‘ಜೇಮ್ಸ್‌’ ತೆರೆಗೆ ಬರುತ್ತಿದೆ. 

James 2022: ಐದು ದಿನ ಮೊದಲೇ ಸೋಲ್ಡೌಟ್ ಆಯ್ತು ಅಪ್ಪು ಚಿತ್ರದ ಟಿಕೆಟ್!

ಯುಎಸ್‌ನಲ್ಲಿ 270 ಸ್ಕ್ರೀನ್‌, ಆಸ್ಪ್ರೇಲಿಯಾದಲ್ಲಿ 150 ಸ್ಕ್ರೀನ್‌ ಸೇರಿ ಹೊರ ದೇಶಗಳಲ್ಲಿ ಒಟ್ಟು 1000 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುವುದಕ್ಕೆ ಸಜ್ಜಾಗಿದೆ. ವಿಶೇಷ ಎಂದರೆ ಆಸ್ಪ್ರೇಲಿಯಾ (Australia) ಸೆನ್ಸಾರ್‌ ಮಂಡಳಿಯಲ್ಲಿ (Censor Board) ಸೆನ್ಸಾರ್‌ ಮಾಡಿಕೊಂಡ ಮೊದಲ ಕನ್ನಡ ಸಿನಿಮಾ ‘ಜೇಮ್ಸ್‌’. ಚೇತನ್ ಕುಮಾರ್ (Chetan Kumar) ನಿರ್ದೇಶನದ ಈ ಚಿತ್ರಕ್ಕೆ ಕಿಶೋರ್ ಪತ್ತಿಕೊಂಡ (Kishore Pathikonda) ಬಂಡವಾಳ ಹೂಡಿದ್ದು, ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಚಿತ್ರದಲ್ಲಿ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies