Asianet Suvarna News Asianet Suvarna News

ಪ್ರೇಮಿಗಳ ದಿನಕ್ಕೆ ಲವರ್ಸ್‌ಗೆ ಭರ್ಜರಿ ಆಫರ್ ಕೊಟ್ಟ ಪ್ರಣಯಂ ಟೀಂ: ಏನು ಗೊತ್ತಾ?

ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನ. ಈ ಲವರ್ಸ್ ಡೇ ವಿಶೇಷವಾಗಿ ಕನ್ನಡದಲ್ಲಿ ಲವ್ ಸ್ಟೋರಿಗಳ ಸಾಲು ಸಾಲು ಸಿನಿಮಾಗಳ ರಿಲೀಸ್ ಆಗಿವೆ. ಆದ್ರೆ ಆ ಎಲ್ಲಾ ಸಿನಿಮಾಗಳ ಮಧ್ಯೆ ಪ್ರೇಕ್ಷಕರ ಮನ ಗೆದ್ದಿರೋ ಸಿನಿಮಾ ಪ್ರಣಯಂ. 
 

ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನ. ಈ ಲವರ್ಸ್ ಡೇ ವಿಶೇಷವಾಗಿ ಕನ್ನಡದಲ್ಲಿ ಲವ್ ಸ್ಟೋರಿಗಳ ಸಾಲು ಸಾಲು ಸಿನಿಮಾಗಳ ರಿಲೀಸ್ ಆಗಿವೆ. ಆದ್ರೆ ಆ ಎಲ್ಲಾ ಸಿನಿಮಾಗಳ ಮಧ್ಯೆ ಪ್ರೇಕ್ಷಕರ ಮನ ಗೆದ್ದಿರೋ ಸಿನಿಮಾ ಪ್ರಣಯಂ. ಹಿರಿಯ ನಟ ಡಿಗ್ರಿ ನಾಗರಾಜ್ ಪುತ್ರ ಬಿಚ್ಚುಗತ್ತಿ ಖ್ಯಾತಿಯ ರಾಜವರ್ಧನ್ ನಾಯಕನಾಗಿ ನೈನಾ ಗಂಗೂಲಿ ನಾಯಕಿಯಾಗಿ ನಟಿಸಿರೋ ಪ್ರಣಯಂ ಸಿನಿಮಾ ಯುವ ಪ್ರೇಮಿಗಳ ಮನಸ್ಸು ಗೆಲ್ಲುತ್ತಿದೆ. ಇದೀಗ ವ್ಯಾಲೆಂಟೇನ್ ಡೇ ದಿನದಂದು ಪ್ರಣಯಂ ಚಿತ್ರತಂಡ ಪ್ರೇಮಿಗಳಿಗಾಗೆ ಬಿಗ್ ಆಪರ್ ಒಂದನ್ನ ಕೊಟ್ಟಿದೆ. ಪ್ರಣಯಂ ಸಿನಿಮಾ ರಿಲೀಸ್ ಆದ ಮುಖ್ಯ ಚಿತ್ರಮಂದಿರ ಗಾಂದಿನಗರದ ಕೆಜಿ ರೋಡ್ನಲ್ಲಿರೋ ಸಂತೋಷ್ ಚಿತ್ರಮಂದಿರದಲ್ಲಿ ಪ್ರೇಮಿಗಳು ಹಾಗು ಕಾಲೇಜು ವಿಧ್ಯಾರ್ಥಿಗಳಿಗೆ ಫ್ರೀ ಶೋಗಳನ್ನ ಹಾಕುತ್ತಿದೆ. ಅಷ್ಟೆ ಅಲ್ಲ ಪ್ರಣಯಂ ಚಿತ್ರತಂಡ ಕೇಳೋ ಪಶ್ನೆಗೆ ಸರಿಯಾದ ಉತ್ತರ ಕೊಟ್ಟವರಿಗೆ 10 ಸಾವಿರ ಬಹುಮಾನ ಕೂಡ ನೀಡಲಾಗ್ತಿದೆ. ಹೀಗಾಗಿ ನಾಳೆ ಸಂತೋಷ್ ಚಿತ್ರಮಂದಿರದಲ್ಲಿ ಎಸ್. ದತ್ತಾತ್ರೇಯ   ನಿರ್ದೇಶನದ ಪ್ರಣಯಂ ಸಿನಿಮಾವನ್ನ ಪ್ರೇಮಿಗಳು ಕಾಲೇಜ್ ಸ್ಟುಡೆಂಟ್ಸ್ ಫ್ರೀಯಾಗಿ ಸಿನಿಮಾ ನೋಡೋ ಚಾನ್ಸ್ ಸಿಗುತ್ತಿದೆ.