Asianet Suvarna News Asianet Suvarna News

'ಮಿಸ್ಟರ್‌ ನಟ್ವರ್‌ ಲಾಲ್‌' ಚಿತ್ರದ ಟ್ರೈಲರ್‌ ಬಿಡುಗಡೆ: ಸಿನಿಮಾ ಬಗ್ಗೆ ಡೈರೆಕ್ಟರ್ ಲವ ಹೇಳಿದ್ದೇನು ಗೊತ್ತಾ..?

'ಮಿಸ್ಟರ್‌ ನಟ್ವರ್‌ ಲಾಲ್‌'ಸಿನಿಮಾದಲ್ಲಿ ಎರಡು ಹಾಡುಗಳಿದ್ದು, ಟೆಕ್ನಿಕಲಿ ಸ್ಟ್ರಾಂಗ್‌ ಆಗಿರುವ ಸಿನಿಮಾ ಇದಾಗಿದೆ. ಇದೊಂದು ಫ್ಯಾಮಿಲಿ ಜೊತೆ ಕೂತು ನೋಡುವ ಸಿನಿಮಾವಾಗಿದೆ.

'ಮಿಸ್ಟರ್‌ ನಟ್ವರ್‌ ಲಾಲ್‌'ಸಿನಿಮಾದ (Mr.Natwar Lal movie) ಟ್ರೈಲರ್‌ (Trailer) ಬಿಡುಗಡೆಯಾಗಿದ್ದು, ಫೆ.23 ರಂದು ಚಿತ್ರ ಬಿಡುಗಡೆಯಾಗಲಿದೆ. ತನುಷ್ ಶಿವಣ್ಣ ಈ ಸಿನಿಮಾವನ್ನು ನಿರ್ಮಿಸಿ, ನಟಿಸಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್‌ ಸಿನಿಮಾವಾಗಿದ್ದು, ನಾಯಕಿಯಾಗಿ ಸೋನಾಲ್‌ ಮೊಂಟೆರೊ ನಟಿಸಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಹಾಗೂ ಆಕ್ಷನ್ ಜಾನರ್ ಚಿತ್ರವಾಗಿದೆ. ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಗಳನ್ನೇ ಆಧರಿಸಿ ಕಥೆ ಮಾಡಲಾಗಿದೆ. ಬೆಂಗಳೂರು, ಮೈಸೂರು ಸಕಲೇಶಪುರ, ಮಂಗಳೂರು, ಸುತ್ತಮುತ್ತ 95 ದಿನಗಳ ಕಾಲ ಚಿತ್ರೀಕರಣ ನಡೆದಿದೆ.ಚಿತ್ರದಲ್ಲಿ 2 ಹಾಡುಗಳಿವೆ.ತನುಷ್ ಒಬ್ಬ ಅತ್ಯುತ್ತಮ ಸ್ನೇಹಿತ. ಈ ಸಲ ಯಶಸ್ಸು ಕಾಣಲೇಬೇಕೆಂದು ನಿರ್ಧರಿಸಿ ತುಂಬ ಪ್ರಯತ್ನ ಹಾಕಿದ್ದಾರೆ. ಇದು ಎಲ್ಲಾ ವರ್ಗದವರೂ ಇಷ್ಟಪಡುವಂಥ ಚಿತ್ರ ಎಂದು ನಟ ರಾಜೇಂದ್ರ ಕಾರಂತ್ ಹೇಳಿದರು.

ಇದನ್ನೂ ವೀಕ್ಷಿಸಿ:  ಮಿಸ್ಟರ್‌ ನಟ್ವರ್‌ ಲಾಲ್‌ ಸಿನಿಮಾ ಫೆ. 23ರಂದು ಬಿಡುಗಡೆ: ಈ ಬಗ್ಗೆ ನಟ ತನುಷ್ ಶಿವಣ್ಣ ಹೇಳಿದ್ದೇನು ?

Video Top Stories