Asianet Suvarna News Asianet Suvarna News

ಐ‍ಷಾರಾಮಿ ಕಾರಿಗೆ ಗುಡ್‌ಬೈ ಹೇಳಿದ ಡಿ-ಬಾಸ್‌; 'ಕರಿಯಾ' ಚಿತ್ರದ ಲೂನಾ ನೋಡಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾನುವಾರ ತಮ್ಮ ಫಾರ್ಮ್‌ ಹೌಸ್‌ನಲ್ಲಿ ದುಬಾರಿ ಕಾರುಗಳನ್ನು ಪಕ್ಕಕ್ಕಿಟ್ಟು, ಕರಿಯಾ ಚಿತ್ರದ ಲೂನಾದಲ್ಲಿ ಸವಾರಿ ಮಾಡಿದ್ದಾರೆ...
 

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ ಜೀವನದಲ್ಲಿ ನಡೆದು ಬಂದ ಹಾದಿ ಹೇಳಿದರೆ ನೀವೇ ಶಾಕ್‌ ಆಗ್ತೀರಾ...! ಸರ್ಕಾರಿ ಬಸ್‌, ಲೂನಾದಲ್ಲಿ ಓಡಾಡುತ್ತಿದ್ದ ಲೈಟ್‌ ಮ್ಯಾನ್‌ ಈಗಾ ಕರ್ನಾಟದಲ್ಲೇ ಅತಿ ಹೆಚ್ಚು ದುಬಾರಿ ಕಾರುಗಳನ್ನು ಹೊಂದಿರುವ 'ಒಡೆಯ'.

ಡಿ-ಬಾಸ್ ಡಿಫರೆಂಟ್‌ ಸಂಕ್ರಾಂತಿ ಸೆಲೆಬ್ರೇಷನ್; ಕಿಚ್ಚು ಹಾಯಿಸಿದ್ದು ಹೀಗೆ!

ವೀಕೆಂಡ್‌ ಬಂದ್ರೆ ಸಾಕು ತಮ್ಮ ಫಾರ್ಮ್‌ ಹೌಸ್‌ನಲ್ಲಿ ಪ್ರಾಣಿ-ಪಕ್ಷಿಗಳೊಂದಿಗೆ ಕಾಲ ಕಳೆಯುತ್ತಾರೆ. ಪುತ್ರನೊಂದಿಗೆ ಕುದುರೆ ಸವಾರಿ ಮಾಡುತ್ತಾರೆ ಇಲ್ಲವಾದರೆ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಆದರೆ ಈ ವೀಕೆಂಡ್‌ ಮಾತ್ರ ಫುಲ್‌ ಡಿಫರೆಂಟ್‌. 

ಚಿತ್ರರಂಗದಲ್ಲಿ ಲೈಟ್‌ ಮ್ಯಾನ್‌ ಆಗಿ ನಟನಾಗಲು ಕಷ್ಟ ಪಡುತ್ತಿದ್ದ ಸಮಯದಲ್ಲಿ ದರ್ಶನ್‌ಗೆ ತಂದೆ ತೂಗುದೀಪ್‌ ಶ್ರೀನಿವಾಸ್‌ ಲೂನಾವೊಂದನ್ನು ಕೊಡಿಸಿದ್ದರು. ಈಗಲೂ ಈ ಲೂನಾ ಗಾಡಿಯನ್ನು ಜೋಪಾನ ಮಾಡಿದ್ದಾರೆ. ಭಾನುವಾರ ತಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಾ ಲೂನಾ ಸಾವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.