Asianet Suvarna News Asianet Suvarna News

ಗಡಂಗ್ ರಕ್ಕಮ್ಮನ ಸಖತ್ ಲುಕ್‌ಗೆ ಸಿನಿಪ್ರಿಯರ್ ಕ್ಲೀನ್ ಬೋಲ್ಡ್

Aug 1, 2021, 3:05 PM IST

ಮುಂಬೈನಲ್ಲಿ ಕನ್ನಡ ಸಿನಿಮಾದ ಹವಾ ಶುರುವಾಗಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ವತಃ ವಿಕ್ರಾಂತ್ ರೋಣದ ಫಸ್ಟ್‌ಲುಕ್ ರಿವೀಲ್ ಮಾಡಿದ್ದಾರೆ. ಕಿಚ್ಚ ಸುದೀಪ್ ಹಾಗೂ ಕಿಚ್ಚ ಸದೀಪ್ ಜೋಡಿ ಮಾಡಿರುವ ಮೋಡಿಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣವಾಗುತ್ತಿದೆ.

'ವಿಕ್ರಾಂತ್ ರೋಣ' ಚಿತ್ರದಲ್ಲಿ ಜಾಕ್ವೆಲಿನ್ 'ಗಡಂಗ್ ರಕ್ಕಮ್ಮ' ಲುಕ್ ರಿವೀಲ್!

ಈಗ ಸಿನಿಮಾಗೆ ಇನ್ನಷ್ಟು ಮೆರುಗು ತಂದಿರೋದು ಗಡಂಗ್ ರಕ್ಕಮ್ಮ. ಶ್ರೀಲಂಕನ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಈಗ ವಿಕ್ರಾಂತ್ ರೋಣ ತಂಡವನ್ನು ಸೇರಿಕೊಂಡಿದ್ದು, ಸಿನಿ ಪ್ರಿಯರ ಮತ್ತೇರಿಸಿದ್ದಾರೆ ಬಾಲಿವುಡ್ ಬೆಡಗಿ. ಮುಂಬೈನಲ್ಲಿ ಗಡಂಗ್ ರಕ್ಕಮ್ಮನ ಫಸ್ಟ್‌ ಲುಕ್ ರಿವೀಲ್ ಆಗಿದ್ದು, ಸಿನಿಮಾದಲ್ಲಿ ನಟಿ ನರ್ತಿಸೋದರ ಜೊತೆಗೆ ನಟನೆ ಕೂಡಾ ಮಾಡಿದ್ದಾರೆ. ಮತ್ತೇರಿಸೋ ಮೋಹನಾಂಗಿ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಸುದೀಪ್‌ ಜೊತೆ ಸಖತ್ ಸೌಂಡ್ ಮಾಡುತ್ತಿದ್ದಾರೆ.