Asianet Suvarna News Asianet Suvarna News

ನಟ ದರ್ಶನ್ ಹುಟ್ಟುಹಬ್ಬ ಆಚರಣೆಗೆ ಆಕ್ಟೀವ್ ಆದ ಫ್ಯಾನ್ಸ್: ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೇಷನ್ ಶುರು!

ಫೆಬ್ರವರಿ ತಿಂಗಳು ಬಂದ್ರೆ ನಟ ದರ್ಶನ್ ಅಭಿಮಾನಿಗಳು ಆಕ್ಟಿವ್ ಆಗುತ್ತಾರೆ. ಕಾರಣ ಏನು ಅಂತ ವಿಶೇಷವಾಗಿ ಹೇಳಬೇಕಿಲ್ಲ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ 15 ದಿನಗಳಿಗೂ ಮುನ್ನವೇ ಸಿದ್ಧತೆಗಳು ಆರಂಭ ಆಗುತ್ತವೆ. 

ಫೆಬ್ರವರಿ ತಿಂಗಳು ಬಂದ್ರೆ ನಟ ದರ್ಶನ್ ಅಭಿಮಾನಿಗಳು ಆಕ್ಟಿವ್ ಆಗುತ್ತಾರೆ. ಕಾರಣ ಏನು ಅಂತ ವಿಶೇಷವಾಗಿ ಹೇಳಬೇಕಿಲ್ಲ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ 15 ದಿನಗಳಿಗೂ ಮುನ್ನವೇ ಸಿದ್ಧತೆಗಳು ಆರಂಭ ಆಗುತ್ತವೆ. ಈ ಬಾರಿ ಕೂಡ ದರ್ಶನ್ ಬರ್ತ್‌ಡೇ ಜೋರಾಗಿಯೇ ಆಚರಿಸುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು 10 ದಿನ ಬಾಕಿ ಇದೆ. ಫ್ರೆಬ್ರವರಿ 16ಕ್ಕೆ ನಟ ದರ್ಶನ್ ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಹೀಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್ ಟ್ರೆಂಡಿಂಗ್‌ನಲ್ಲಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿ ಈಗಾಗಲೇ ಬ್ಯಾನರ್, ಕಟೌಟ್ ಅಂತ ಕಟ್ಟುವುದಕ್ಕೆ ಶುರುಮಾಡಿದ್ದಾರೆ. 

ಹಾಗೇ ಸೋಶಿಯಲ್ ಮೀಡಿಯಾದಲ್ಲಿ ತಾವೇ ಕ್ರಿಯೇಟಿವ್ ಆಗಿ ಪೋಸ್ಟರ್‌ಗಳನ್ನು ಡಿಸೈನ್ ಮಾಡಿ ಟ್ರೆಂಡ್ ಮಾಡುತ್ತಿದ್ದು ದರ್ಶನ್ಗೆ ಆಡ್ವಾನ್ಸ್ ಆಗಿ ಹ್ಯಾಪಿ ಬರ್ತ್ಡೇ ಅಂತ ವಿಶ್ ಮಾಡುತ್ತಿದ್ದಾರೆ.  ನಟ ದರ್ಶನ್ ಜನ್ಮದಿನಕ್ಕೆ ಎರಡು ಬಿಗ್ ಸರ್ಪ್ರೈಸ್ ರೆಡಿಯಾಗಿವೆ. ಒಂದು ಮಿಲನಾ ಪ್ರಕಾಶ್ ನಿರ್ದೇಶನದ ಡೆವಿಲ್ ದಿ ಹೀರೋ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗುತ್ತಿದೆ. ಮತ್ತೊಂದು ಕೆಡಿ ಡೈರೆಕ್ಟರ್ ಜೋಗಿ ಪ್ರೇಮ್ ಸಾರಥ್ಯದಲ್ಲಿ ದರ್ಶನ್ ಸಿನಿಮಾ ಅನೌನ್ಸ್ ಆಗಿದೆ. ಆ ಸಿನಿಮಾದ ಟೈಟಲ್ ಕೂಡ ರಿವಿಲ್ ಆಗುತ್ತಿದೆ ಅಂತ ಹೇಳಲಾಗ್ತಿದೆ. ಹೀಗಾಗಿ ಈ ಭಾರಿ ದರ್ಶನ್ ಹುಟ್ಟುಹಬ್ಬ ಸ್ವಲ್ಪ ಜೋರಾಗೇ ಇರಲಿದೆ.

Video Top Stories