Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನಲ್ಲಿ ಲಂಕೆ ಹವಾ, ಯೋಗಿ, ಕೃಷಿ ಕಾಂಬಿನೇಶನ್!

* ಲೂಸ್ ಮಾದ ಯೋಗಿ ಲಂಕೆ ಸಿನಿಮಾದ ವಿಶೇಷತೆಗಳೇನು>
* ರಾಮನ ತೇಜಸ್ಸು, ರಾವಣನ ವರ್ಚಸ್ಸು ಎಂಬ ಟ್ಯಾಗ್ ಲೈನ್
* ಗಮನ ಸೆಳೆದಿರಿವ ಚಿತ್ರದ ಪೋಸ್ಟರ್ ಗಳು
* ಒಳ್ಳೆಯತನ ಮತ್ತು ಕೆಟ್ಟತನದ ನಡುವಿನ ಯುದ್ಧ

ಬೆಂಗಳೂರು(ಸೆ. 09)  ರಾಮನ ತೇಜಸ್ಸು, ರಾವಣನ ವರ್ಚಸ್ಸು ಎಂಬ ಟ್ಯಾಗ್ ಲೈನ್ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ‘ಲಂಕೆ’. ಲೂಸ್ ಮಾದ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಲು ರೆಡಿಯಾಗಿದೆ.

ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಹೆಣೆದಿರುವ ನಿರ್ದೇಶಕರು ಈ ಚಿತ್ರ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ ಎಂಬ ಭರವಸೆ ನೀಡಿದ್ದಾರೆ. ಯೋಗಿ ಪಾತ್ರ ವಿಭಿನ್ನವಾಗಿ ಮೂಡಿ ಬಂದಿದ್ದು ಡಿಫ್ರೆಂಟ್ ಮ್ಯಾನರಿಸಂ ಹಾಗೂ ಲುಕ್ ನಿಂದ ಯೋಗಿ ಲಂಕೆಯಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ರಾಮ್ ಪ್ರಸಾದ್.

ರಾಮ ಮತ್ತು ರಾವಣ ಎರಡೂ ಅವತಾರದಲ್ಲಿ ಯೋಗಿ

ಲಂಕೆಯಲ್ಲಿ ಡೊಡ್ಡ ತಾರಾಬಳಗವಿದ್ದು, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಶೋಭ್ ರಾಜ್,ಡ್ಯಾನಿ ಕುಟ್ಟಪ್ಪ, ವಾಣಿಶ್ರೀ ಹಾಗೂ ಇನ್ನಿತರ ಸ್ಟಾರ್ ಕಲಾವಿದರ ದಂಡು ಚಿತ್ರದಲ್ಲಿದೆ. ಯುವ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ, ರಮೇಶ್ ಬಾಬು ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಡಿ ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ತುಣುಕುಗಳ ಮೂಲಕ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ‘ಲಂಕೆ’ ಚಿತ್ರ ಸೆಪ್ಟೆಂಬರ್ 10ರಂದು ಕನ್ನಡಿಗರ ಕಣ್ಣಿಗೆ ಸಿಗಲಿದೆ.