Asianet Suvarna News Asianet Suvarna News

ರಕ್ಷಿತ್ ಶೆಟ್ಟಿಯ ಬ್ಯಾಚುಲರ್ ಪಾರ್ಟಿ ಟ್ರೈಲರ್ ಔಟ್: ಬ್ಯಾಂಕಾಕ್‌ನಲ್ಲಿ ಭರ್ಜರಿ ಪಾರ್ಟಿ!

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರೋ ಬ್ಯಾಚುಲರ್ ಪಾರ್ಟಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಪಾರ್ಟಿಯಲ್ಲಿ ನಟ ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಭರ್ಜರಿ ಮಸ್ತಿ ಮಾಡಿದ್ದಾರೆ. 
 

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರೋ ಬ್ಯಾಚುಲರ್ ಪಾರ್ಟಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಪಾರ್ಟಿಯಲ್ಲಿ ನಟ ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಭರ್ಜರಿ ಮಸ್ತಿ ಮಾಡಿದ್ದಾರೆ. ಗೆಳೆಯನಿಗೆ ಮದುವೆ ಫಿಕ್ಸ್ ಆದ ಖುಷಿಯಲ್ಲಿ ಬ್ಯಾಂಕಾಕ್ಗೆ ಬ್ಯಾಚುಲರ್ ಪಾರ್ಟಿ ಮಾಡಲು ಹೋಗುವ ಗೆಳೆಯರು ನಾನಾ ತೊಂದರೆಗೆ ಸಿಲುಕಿಕೊಳ್ಳುವ ಕಥೆ ಈ ಸಿನಿಮಾದಲ್ಲಿದೆ. ಹೆಂಡತಿ ಕೊಡುವ ಟಾರ್ಚರ್ನಿಂದ ಬೇಸತ್ತ ಗಂಡನ ಪಾತ್ರದಲ್ಲಿ ನಟ ದಿಗಂತ್ ಕಾಣಿಸಿಕೊಂಡಿದ್ದಾರೆ. ಯೋಗಿ ಮದುವೆಯಾದ ಸ್ನೇಹಿತರ ಸಹವಾಸವೇ ಬೇಡ ಎನ್ನುತ್ತಾ ಭಾಷೆ ಬರದ ಬ್ಯಾಂಕಾಕ್ ಬೆಡಗಿಯ ಪ್ರೀತಿಯಲ್ಲಿ ಬೀಳ್ತಾರೆ. ದಿಗಂತ್ ಹಾಗೂ ಯೋಗಿ ಸಖತ್ ಕಾಮಿಡ್ ಕಿಕ್ ನೀಡಿದ್ದಾರೆ. ದಿಗಂತ್ ಹಾಗೂ ಯೋಗಿ ಜೊತೆ ಅಚ್ಯುತ್ ಕುಮಾರ್, ಪ್ರಕಾಶ್ ಕೂಡ ಹಾಸ್ಯದ ಹೊನಲು ಹರಸಿದ್ದಾರೆ. ಬ್ಯಾಚ್ಯುಲರ್ ಪಾರ್ಟಿ ಚಿತ್ರವನ್ನ ಅಭಿಜಿತ್ ಮಹೇಶ್ ಡೈರೆಕ್ಟ್ ಮಾಡಿದ್ದಾರೆ. ಟ್ರೈಲರ್ ನೋಡಿದ್ರೆ ಥಿಯೇಟರ್ನಲ್ಲಿ ಕೂತು ಸಿನಿಮಾ ನೋಡುವ ಪ್ರೇಕ್ಷಕರಿಗೆ ಚಿತ್ರ ಒಳ್ಳೆ ಮನರಂಜನೆ ನೀಡೋದು ಪಕ್ಕಾ ಅನಿಸುತ್ತೆ. ಜನವರಿ 26ಕ್ಕೆ ಈ ಸಿನಿಮಾ ತೆರೆ ಮೇಲೆ ಮೂಡಿ ಬರಲಿದೆ.

Video Top Stories