Asianet Suvarna News Asianet Suvarna News

Martin Teaser; ಟೀಸರ್‌ನಿಂದ ಬಂದ ಹಣ ಒಳ್ಳೆಯ ಉದ್ದೇಶಕ್ಕೆ ಉಪಯೋಗ ಆಗ್ತಿದೆ; ಎಪಿ ಅರ್ಜುನ್

ಮಾರ್ಟಿನ್ ಟೀಸರ್ ನಿಂದ ಬಂದ ಹಣವನ್ನು ಗೋಶಾಲೆಗೆ ನೀಡುವುದಾಗಿ ನಿರ್ದೇಶಕ ಎಪಿ ಅರ್ಜುನ್ ಹೇಳಿದ್ದಾರೆ. 

ಟೀಸರ್ ಈ ಮಟ್ಟಕ್ಕೆ ಸೌಂಡ್ ಮಾಡುತ್ತೆ ಎನ್ನುವುದೇ ದೊಡ್ಡ ವಿಚಾರ. ಸಿನಿಮಾಗಿಂತ ಮೊದಲು ಟೀಸರ್ ಸದ್ದು ಮಾಡುತ್ತಿರುವುದು ಖುಷಿಯಾಗಿದೆ. ಟೀಸರ್‌ಗೆ ದುಡ್ಡು ಇಟ್ಟಿರುವುದು ಬೆಳ್ಳಿ ಪರದೆ ಮೇಲೆ ಎಲ್ಲರೂ ನೋಡಲು ಎನ್ನುವ ಉದ್ದೇಶಕ್ಕೆ ಅಲ್ಲದೇ ಇದರಿಂದ ಬರುವ ಹಣವನ್ನು ಗೋಶಾಲೆಗೆ ನೀಡುವುದಾಗಿ ನಿರ್ದೇಶಕ ಎಪಿ ಅರ್ಜುನ್ ಹೇಳಿದ್ದಾರೆ. ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ಅದ್ದೂರಿಯಾಗಿ ರಿಲೀಸ್ ಮಾಡಲಾಯಿತು. ಎಪಿ ಅರ್ಜುನ್ ಸಾರಥ್ಯದಲ್ಲಿ ಬಂದಿರುವ ಮಾರ್ಟಿನ್ ಭಾರಿ ನಿರೀಕ್ಷೆ ಮೂಡಿಸಿದೆ.  ಮಾರ್ಟಿನ್ ಟೀಸರ್ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಕುತೂಹಲಕ್ಕೆ ತೆರೆಬಿದ್ದಿದೆ. ವೀರೇಶ್ ಚಿತ್ರಮಂದಿರದಲ್ಲಿ ಮಾರ್ಟೀನ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.