Asianet Suvarna News Asianet Suvarna News

ಗಂಧದ ಗುಡಿ ನೋಡಿದ ಮೋಹಕ ತಾರೆ: 'ಮಿಸ್‌ ಯು ಅಪ್ಪು' ಎಂದ ರಮ್ಯಾ

ಮನುಷ್ಯನಿಗೆ ಜೀವನದಲ್ಲಿ ಉತ್ತಮ ಪಾಠವನ್ನು ಕಲಿಬೇಕು ಅನಿಸಿದರೆ ಅದು ಗಂಧದಗುಡಿ ಸಿನಿಮಾದಿಂದ ಸಿಗುತ್ತದೆ ಎಂದು ನಟಿ ರಮ್ಯಾ ತಿಳಿಸಿದರು.
 

First Published Oct 28, 2022, 4:08 PM IST | Last Updated Oct 28, 2022, 4:08 PM IST

ಅಪ್ಪು ಗಂಧದಗುಡಿ ಸಿನಿಮಾ ಮೂಲಕ ಉತ್ತಮ ಪಾಠವನ್ನು ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಈ ಸಿನಿಮಾಗೆ ಟ್ಯಾಕ್ಸ್‌ ಫ್ರೀ ಮಾಡಬೇಕು. ಆದಷ್ಟು ಜನ ಈ ಸಿನಿಮಾವನ್ನು ನೋಡಬೇಕು. ಮುಖ್ಯವಾಗಿ ಮಕ್ಕಳು ಈ ಸಿನಿಮಾವನ್ನು ನೋಡಬೇಕು ಎಂದರು. ಪ್ಲಾಸ್ಟಿಕ್‌ ಬಗ್ಗೆ ಕಾಡನ್ನು ಕಾಪಾಡುವುದರ ಬಗ್ಗೆ ಪ್ರಾಣಿಗಳ ಬಗ್ಗೆ ತೋರಿಸಿದ್ದಾರೆ. ಎಷ್ಟು ಸಿಂಪಲ್‌ ಆಗಿ ಉತ್ತಮ ಮಾತುಗಳನ್ನು ಅಪ್ಪು ಸಿನಿಮಾದಲ್ಲಿ ಹೇಳಿದ್ದಾರೆ. ಪ್ರತಿಯೊಬ್ಬರು ಅಪ್ಪುವಿನ ಹಾಗೆ ಇರಬೇಕು. ಉತ್ತಮ ಮನುಷ್ಯನಾಗಲು ಬೇಕಾಗುವಂತಹ ಎಲ್ಲಾ ಮಾಹಿತಿ ಸಿನಿಮಾದಲ್ಲಿದೆ. ಅಪ್ಪು ಯಾವಾಗಲೂ ಇದಾರೆ ಅಪ್ಪು ಎಲ್ಲಿಗೂ ಹೋಗಿಲ್ಲ, ಅಪ್ಪುನ ನಿಜವಾಗಲೂ ಮಿಸ್‌ ಮಾಡಿಕೊಳ್ಳುತ್ತೇವೆ ಎಂದರು.

ಉಡುಪಿ: ನೆರವಿನ ನಿರೀಕ್ಷೆಯಲ್ಲಿ ಕ್ರೀಡಾಪಟು, ಗ್ರಾಮೀಣ ಪ್ರತಿಭೆಯ ಕನಸು ನನಸಾಗುತ್ತಾ?