Asianet Suvarna News Asianet Suvarna News

ಮೋಹಕ ತಾರೆ ಕಂಬ್ಯಾಕ್‌ಗೆ ಮುಹೂರ್ತ ಫಿಕ್ಸ್; ಶೆಟ್ರ ಜೊತೆ ರಮ್ಯಾ ಸಿನಿಮಾ

 ಯಾವಾಗಪ್ಪ ಬೆಳ್ಳೆ ಪರದೆ ಮೇಲೆ ರಮ್ಯಾರನ್ನ ಮತ್ತೆ ನೋಡ್ತಿವಿ ಅಂತಿದ್ದ ಫ್ಯಾನ್ಸ್ ಗೆ ರಮ್ಯಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ರಮ್ಯಾ ಕಮ್ ಬ್ಯಾಕ್ ಮಾಡ್ತಾರೆ ಅನ್ನೋ ಸುದ್ದಿ ಸಾಕಷ್ಟು ದಿನಗಳಿಂದ ಕೇಳಿ ಬರ್ತಾನೆ ಇದೆ. ಆದ್ರೆ ಈ ಬಗ್ಗೆ ರಮ್ಯಾ ಮಾತ್ರ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಇಷ್ಟು ದಿನ ಅಂತೆ ಕಂತೆಯಂತಿದ್ದ ಈ ಸುದ್ದಿ. ಈಗ ಕನ್ಫರ್ಮ್ ಅಂತಿದೆ ಮೂಲಗಳು. 

Aug 11, 2022, 3:34 PM IST

ಗೋಲ್ಡನ್ ಕ್ವೀನ್, ಮೋಹಕ ತಾರೆ ರಮ್ಯಾ ಸ್ಕ್ರೀನ್ ಮೇಲೆ ಬಂದ್ರೆ ಸಾಕು ಅಭಿಮಾನಿಗಳು ಹುಚ್ಚೇದು ಕುಣಿತಾರೆ. ಇನ್ನು ಇವ್ರ ಎಕ್ಸ್ ಪ್ರೇಷನ್‌ಗೆ ಫಿದಾ ಆಗದವರಿಲ್ಲ. ಯಾವಾಗಪ್ಪ ಬೆಳ್ಳೆ ಪರದೆ ಮೇಲೆ ರಮ್ಯಾರನ್ನ ಮತ್ತೆ ನೋಡ್ತಿವಿ ಅಂತಿದ್ದ ಫ್ಯಾನ್ಸ್ ಗೆ ರಮ್ಯಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ರಮ್ಯಾ ಕಮ್ ಬ್ಯಾಕ್ ಮಾಡ್ತಾರೆ ಅನ್ನೋ ಸುದ್ದಿ ಸಾಕಷ್ಟು ದಿನಗಳಿಂದ ಕೇಳಿ ಬರ್ತಾನೆ ಇದೆ. ಆದ್ರೆ ಈ ಬಗ್ಗೆ ರಮ್ಯಾ ಮಾತ್ರ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಇಷ್ಟು ದಿನ ಅಂತೆ ಕಂತೆಯಂತಿದ್ದ ಈ ಸುದ್ದಿ. ಈಗ ಕನ್ಫರ್ಮ್ ಅಂತಿದೆ ಮೂಲಗಳು. ಯೆಸ್ ಸ್ಯಾಂಡಲ್ ವುಡ್ ಪದ್ಮಾವತಿ ಚಿತ್ರರಂಗಕ್ಕೆ ರೀ ಎಂಟ್ರಿಕೊಡೋದಕ್ಕೆ ಅಧಿಕೃತ ಮಹೂರ್ತ ಫಿಕ್ಸ್ ಆಗಿದೆ. ರಮ್ಯಾ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡಬೇಕು ಅನ್ನೋದು ಕೇವಲ ಚಿತ್ರರಂಗದ ಆಸೆಯಲ್ಲ..ಇಡೀ ಅವ್ರ ಅಭಿಮಾನಿ ಬಳಗದ ಆಸೆ..ಅದರಂತೆಯೇ ಈಗ ರಮ್ಯಾ ಕಮ್ ಬ್ಯಾಕ್ ಮಾಡಲು ಡಿಸೈಡ್ ಆಗಿದ್ದು ಆ ಚಿತ್ರವನ್ನ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡ್ತಾರಂತೆ. ರಮ್ಯಾ ರೀ ಎಂಟ್ರಿಕೊಡ್ತಿರೋ ಚಿತ್ರಕ್ಕೆ ಸ್ವತಃ ತಾವೇ ಬಂಡವಾಳ ಹಾಕ್ತಿದ್ದಾರಂತೆ. ರಮ್ಯಾ ಅಭಿನಯದ 39 ಚಿತ್ರಗಳು ರಿಲೀಸ್ ಆಗಿದ್ದು ಇನ್ನೆರೆಡು ಚಿತ್ರಗಳು ಅರ್ಧಕ್ಕೆ ನಿಂತುಹೋಗಿದೆ ಈಗ ತಮ್ಮ 40ನೇ ಸಿನಿಮಾ ಮೂಲಕ ನಾಯಕಿಯಾಗಿ , ನಿರ್ಮಾಪಕಿಯಾಗಿ ಅಖಾಡಕ್ಕಿಳಿಯಲಿದ್ದಾರೆ ಮೋಹಕತಾರೆ.