Asianet Suvarna News Asianet Suvarna News

2022 'ಅನು'ಗೆ 'ಸಿರಿ' ತಂದ ವರ್ಷ: ಬಿಗ್ ಸ್ಕ್ರೀನ್ ಮೇಲೆ ಮೇಘಾ ಶೆಟ್ಟಿ

ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಹೆಸರು ಪಡೆದಿರುವ ನಟಿ ಮೇಘಾ ಶೆಟ್ಟಿ ಇದೀಗ ಸಿನಿಮಾದಲ್ಲಿ ಕೂಡ ನಟಿ ಮಿಂಚುತ್ತಿದ್ದಾರೆ.
 

ಅನು ಸಿರಿಮನೆ ಎಂಬ ಹೆಸರಿನಲ್ಲಿ ಕನ್ನಡ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿರುವ ನಟಿ ಮೇಘಾ ಶೆಟ್ಟಿ, ಇದೀಗ ಹೊಸ ವರ್ಷದ ಸಂಭ್ರಮದಲ್ಲಿದ್ದು, ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಕಿರುತೆರೆಯಿಂದ ಮನೆ-ಮನಗಳಲ್ಲಿ ಉಳಿದುಕೊಂಡ ನಟಿ ಮೇಘಾ ಶೆಟ್ಟಿ, ತ್ರಿಬಲ್‌ ರೈಡಿಂಗ್‌ ಸಿನಿಮಾದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್ ಜೊತೆ ನಟಿಸಿದ್ದಾರೆ. 2022 ತುಂಬಾ ಒಳ್ಳೆಯದನ್ನು ಮಾಡಿದೆ. ನನ್ನ ಎರಡು ಸಿನಿಮಾಗಳು ಹಿಂದಿನ ವರ್ಷ ರಿಲೀಸ್‌ ಆಗಿವೆ‌. ಒಂದು ದಿಲ್‌ ಪಸಂದ್‌ ಮತ್ತೊಂದು ತ್ರಿಬಲ್‌ ರೈಡಿಂಗ್‌ ಎಂದು ಅವರು ತಿಳಿಸಿದರು. ಹಾಗೆ ಫ್ಯಾನ್ಸ್‌ ಎಲ್ಲಾ ಸಿನಿಮಾವನ್ನು ತುಂಬಾ ಚೆನ್ನಾಗಿ ರಿಸೀವ್‌ ಮಾಡಿಕೊಂಡರು. ಮರೆಯಲಾಗದ ಹಾಸ್ಯ ಸನ್ನಿವೇಶ ಎಂದರೆ  ತ್ರಿಬಲ್‌ ರೈಡಿಂಗ್‌ ಚಿತ್ರದಲ್ಲಿ ಡೈಲಾಗ್‌ ಹೇಳುವಾಗ ಫನ್‌ ಆಗಿತ್ತು.  ಫ್ರೆಂಡ್ಸ್‌ ಜೊತೆ ಸೇರಿ ಚೆನ್ನಾಗಿ ಪಾರ್ಟಿ ಮಾಡಿ ಮನೆಯಲ್ಲಿ ಚೆನ್ನಾಗಿ ಉಗಿಸಿಕೊಂಡಿದ್ದೆ. ಕಾಲೇಜ್‌ ನಂತರ ನ್ಯೂ ಈಯರ್‌ ತುಂಬಾ ಸೆಲೆಬ್ರೆಟ್‌ ಮಾಡಿಲ್ಲ ಎಂದು ಅವರು  ಹೇಳಿದರು.
ವೃಂದಾವನ ಆಶ್ರಮದಲ್ಲಿ ವಮಿಕಾ ಜೊತೆ ಅನುಷ್ಕಾ-ವಿರಾಟ್; ವಿಶೇಷ ಪೂಜೆ ಸಲ್ಲಿಸಿದ ಸ್ಟಾರ್ ದಂಪತಿ ಫೋಟೋ ವೈರಲ್

Video Top Stories