ಕುಂಬಾರನಹಳ್ಳಿಯಲ್ಲಿ ನಟ ದುನಿಯಾ ವಿಜಯ್ ರೌಂಡ್ಸ್: ಊರು ಸುತ್ತಿ ಬಾಲ್ಯದ ದಿನ ನೆನಪಿಸಿಕೊಂಡ ಭೀಮ!

ನಟ ದುನಿಯಾ ವಿಜಯ್ ಹುಟ್ಟುಹಬ್ಬದ ಹಸ್ತಿಲಲ್ಲಿದ್ದಾರೆ. ಇದೇ ಜನವರಿ 20ಕ್ಕೆ ನಟ ವಿಜಯ್ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ವಿಜಯ್ ಹುಟ್ಟೂರು ಆನೇಕಲ್ನ ಕುಂಬಾರನಹಳ್ಳಿಯಲ್ಲಿ ಫ್ಯಾನ್ಸ್ ಬೇಟಿ ಮಾಡೋಕೆ ಸಿದ್ಧತೆಗಳನ್ನ ಮಾಡುತ್ತಿದ್ದಾರೆ.

First Published Jan 18, 2024, 10:43 AM IST | Last Updated Jan 18, 2024, 10:43 AM IST

ನಟ ದುನಿಯಾ ವಿಜಯ್ ಹುಟ್ಟುಹಬ್ಬದ ಹಸ್ತಿಲಲ್ಲಿದ್ದಾರೆ. ಇದೇ ಜನವರಿ 20ಕ್ಕೆ ನಟ ವಿಜಯ್ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ವಿಜಯ್ ಹುಟ್ಟೂರು ಆನೇಕಲ್ನ ಕುಂಬಾರನಹಳ್ಳಿಯಲ್ಲಿ ಫ್ಯಾನ್ಸ್ ಬೇಟಿ ಮಾಡೋಕೆ ಸಿದ್ಧತೆಗಳನ್ನ ಮಾಡುತ್ತಿದ್ದಾರೆ. ಈ ಗ್ಯಾಪ್ನಲ್ಲಿ ಸ್ವಲ್ಪ ಫ್ರೀ ಮಾಡಿಕೊಂಡಿರೋ ನಟ ವಿಜಯ್ ತನ್ನ ಹುಟ್ಟೂರುನ್ನ ಒಂದು ರೌಂಡ್ ಸುತ್ತಿದ್ದಾರೆ. ನಟ ವಿಜಯ್ ಹುಟ್ಟೂರು ಆನೇಕಲ್ನ ಕುಂಬಾರನಹಳ್ಳಿ. ಓದು ಬರ ಕಲಿತದ್ದು ಇಲ್ಲೇ. ವಿಜಯ್ ರ ಚಿಕ್ಕಪ್ಪ ದೊಡ್ಡಪ್ಪ ಸೇರಿ ಇಡೀ ಫ್ಯಾಮಿಲಿ ಇರೋದು ಇದೇ ಊರಿನಲ್ಲೇ. ಹೀಗಾಗಿ ತನ್ನ ಬಾಲ್ಯ, ಹಾಗು ಯವ್ವನದ ದಿನಗಳನ್ನ ಕಳೆದ ಊರಿನಲ್ಲೇ ವಿಜಯ್ ರೌಂಡ್ಸ್ ಹೊಡೆದಿದ್ದು ಹಳೇ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಹಿರಿಯ ಆಶೀರ್ವಾದ ಪಡೆದಿದ್ದಾರೆ. ವಿಜಯ್ ತನ್ನ ಕ್ಲಾಸ್ಮೆಟ್ ಹಳೇ ಸ್ನೇಹಿತರನ್ನ ಭೇಟಿ ಮಾಡಿದ್ದಾರೆ. ಊರು ಕೇರಿ, ಹೊಲ ಗದ್ದೆಯಲ್ಲಿ ಸುತ್ತಾಡಿ, ತನ್ನ ಊರಿನ ಈಗಿನ ಸ್ತಿತಿ ಗತಿಯನ್ನ ಕಣ್ಣಾರೆ ನೋಡಿದ್ದಾರೆ. ವಿಜಯ್ ಊರ ಮಂದಿ ಜೊತೆ ಒಬ್ಬರಾಗಿದ್ದು ಈ ವೀಡಿಯೋ ಈಗ ಎಲ್ಲಡೆ ವೈರಲ್ ಆಗುತ್ತಿದೆ.