Asianet Suvarna News Asianet Suvarna News

ಮಗಳು ರುದ್ರಾಕ್ಷಿ ಜೊತೆ ರೀಲ್ಸ್ ಮಾಡಿದ ಆಕ್ಷನ್ ಪ್ರಿನ್ಸ್: ಮಕ್ಕಳ ಜೊತೆ ಧ್ರುವ ಸರ್ಜಾ ಆಟ ಪಾಠ ಹೇಗಿದೆ ಗೊತ್ತಾ?

ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಪ್ರಪಂದ ಇಬ್ಬರು ಮಕ್ಕಳು.. ಒಬ್ಳು ರುದ್ರಾಕ್ಷಿ ಮತ್ತೊಬ್ಬ ಹಯಗ್ರೀವ. ಈ ಇಬ್ಬರು ಮಕ್ಕಳ ಪಾಲನೆ ಪೋಷಣೆ ಮಾಡ್ಕೊಂಡು ಆಟ ಪಾಠ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ ಆಕ್ಷನ್ ಪ್ರಿನ್ಸ್.

ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಪ್ರಪಂದ ಇಬ್ಬರು ಮಕ್ಕಳು.. ಒಬ್ಳು ರುದ್ರಾಕ್ಷಿ ಮತ್ತೊಬ್ಬ ಹಯಗ್ರೀವ. ಈ ಇಬ್ಬರು ಮಕ್ಕಳ ಪಾಲನೆ ಪೋಷಣೆ ಮಾಡ್ಕೊಂಡು ಆಟ ಪಾಠ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ ಆಕ್ಷನ್ ಪ್ರಿನ್ಸ್. ಇದೀಗ ಧ್ರುವ ತನ್ನ ಮುದ್ದಿನ ಮಗಳ ರುದ್ರಾಕ್ಷಿ ಜೊತೆ ರೀಲ್ಸ್ ಮಾಡಿದ್ದಾರೆ. ಮನೆ ತುಂಬಾ ಮಕ್ಕಳಿರಬೇಕು. ಆ ಮನೆ ಕಿಲ ಕಿಲಾ ಅಂತಿರುತ್ತೆ ಅನ್ನೋ ಮಾತು ನಿಜ. ಧ್ರುವ ಸರ್ಜಾ ಮನೆ ಈಗ ಇಬ್ಬರು ಮಕ್ಕಳಿಂದ ಸಂತಸದಲ್ಲಿದೆ. ಶೂಟಿಂಗ್ ಮುಗಿಸಿ ಸುಸ್ತಾಗಿ ಮನೆಗೆ ಹೋದ ಧ್ರುವಗೆ ಇಬ್ಬರು ಮಕ್ಕಳು ನೋಡುತ್ತಿದ್ದಂತೆ ಆ ಸುಸ್ತೆಲ್ಲಾ ಮಾಯ ಈ ಮಕ್ಕಳೇ ನನಗೆ ಮೆಡಿಸಿನ್ ಅಂತ ಆಪ್ತರ ಬಳಿ ಕೇಳಿಕೊಂಡಿದ್ರು ಧ್ರುವ. 

ಈಗ ಮಕ್ಕಳ ಜೊತೆ ರೀಲ್ಸ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ ಕೆಡಿ ಹೀರೋ. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ನಟ ಧ್ರುವ ಸರ್ಜಾ ಪಕ್ಕಾ ಫ್ಯಾಮಿಲಿ ಮ್ಯಾನ್. ಪ್ರೀತಿಸಿದ ಹುಡುಗಿಯನ್ನೇ ಕೈ ಹಿಡಿದ ಧ್ರುವ ತನ್ನ ಪ್ರೀತಿಯನ್ನೂ ಉಳಿಸಿಕೊಂಡ್ರು. ಅಪ್ಪ, ಅಮ್ಮ, ಅಣ್ಣ, ಅಜ್ಜಿ, ಅತ್ತಿಗೆಯನ್ನ ಪ್ರೀತಿಯಿಂದ ನೋಡಿಕೊಳ್ಳೋದು ಧ್ರುವನ ನೇಚರ್. ಶೂಟಿಂಗ್ ಮುಗಿದ್ರೆ ನೇರವಾಗಿ ಮನೆಗೆ ಹೋಗೋ ಧ್ರುವ ಫ್ರೀ ಇದ್ರೆ ಅಣ್ಣನ ಸಮಾಧಿ ಸ್ಥಳಕ್ಕೆ ಹೋಗ್ತಾರೆ. ಧ್ರುವ ತನ್ನ ಇಡೀ ಕುಟುಂಬವನ್ನ ಲವಲವಿಕೆಯಿಂದ ಇಟ್ಟಿದ್ದಾರೆ ಅಂತ ಅವರ ಆಪ್ತರೇ ಹೇಳುತ್ತಾರೆ. ಸಧ್ಯ ಧ್ರುವ ತನ್ನ ಮುದ್ದು ಮಕ್ಕಳ ತೊದಲು ನುಡಿ ಕೇಳುತ್ತಾ ಎಂಜಾಯ್ ಮಾಡ್ತಿದ್ದಾರೆ.

Video Top Stories