ರಾಮಲಲ್ಲಾ ಪ್ರತಿಷ್ಠಾಪನೆಯಂದೇ ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ: ಅಣ್ಣ ಚಿರು ಸಮಾಧಿ ಸ್ಥಳದಲ್ಲೇ ನಾಮಕರಣ!
ನಟ ಧ್ರುವ ಸರ್ಜಾ ಶ್ರೀರಾಮ ಆಂಜನೇಯನ ಪರಮ ಭಕ್ತ. ಎಲ್ಲೇ ಹೋದ್ರು ಜೈ ಆಂಜನೇಯ ಅಂತ ಹೇಳಿ ಬರೋ ಧ್ರುವ ಅಯೋಧ್ಯೆಯಲ್ಲಿ ತನ್ನ ಆರಾಧ್ಯ ದೈವ ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ವಿಶೇಷ ದಿನದಂದೇ ತನ್ನ ಇಬ್ಬರು ಮುದ್ದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.
ನಟ ಧ್ರುವ ಸರ್ಜಾ ಶ್ರೀರಾಮ ಆಂಜನೇಯನ ಪರಮ ಭಕ್ತ. ಎಲ್ಲೇ ಹೋದ್ರು ಜೈ ಆಂಜನೇಯ ಅಂತ ಹೇಳಿ ಬರೋ ಧ್ರುವ ಅಯೋಧ್ಯೆಯಲ್ಲಿ ತನ್ನ ಆರಾಧ್ಯ ದೈವ ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ವಿಶೇಷ ದಿನದಂದೇ ತನ್ನ ಇಬ್ಬರು ಮುದ್ದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಅತ್ತ ಕಡೆ ಅಯೋಧ್ಯೆಯಲ್ಲಿ ಸರಿಯಾಗಿ 12.20ಕ್ಕೆ ರಾಮನ ಪ್ರತಿಷ್ಠಾಪನೆ ಆದ್ರೆ, ಅದೇ ಸಮಯಕ್ಕೆ ಇತ್ತ ತನ್ನ ಮಕ್ಕಳಿಗೆ ಹೆಸರಿಟ್ಟಿದ್ದಾರೆ ಧ್ರುವ ದಂಪತಿ. ಧ್ರುವ ಸರ್ಜಾ ಹೇಗೆ ರಾಮ ಆಂಜನೇಯನ ಭಕ್ತನೋ ಅಷ್ಟೇ ಅಣ್ಣ ಚಿರು ಸರ್ಜಾಗೂ ಭಕ್ತ. ಅಣ್ಣನೇ ದೈವ ಅನ್ನೋ ಧ್ರುವ ಇತ್ತೀಚೆಗಷ್ಟೆ ಅಣ್ಣದ ಸಮಾಧಿ ಸ್ಥಳದಲ್ಲೇ ಮಲಗಿದ್ದ ವೀಡಿಯೋ ಒಂದು ವೈರಲ್ ಆಗಿತ್ತು. ಈಗ ಅದೇ ಜಾಗದಲ್ಲಿ ಮಕ್ಕಳ ನಾಮಕರಣ ಮಾಡಿದ್ದಾರೆ. ರಾಮಾಯಣದಲ್ಲಿ ಬರೋ ಎರಡು ಹೆಸರುಗಳನ್ನೇ ಮಕ್ಕಳಿಗಿಗೆ ಇಟ್ಟಿದ್ದಾರೆ.
ಧ್ರುವ ಹಾಗೂ ಪ್ರೇರಣಾ ದಂಪತಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದಾಳೆ. ಮೊದಲು ಹೆಣ್ಣು ಮಗು ಜನನಿಸಿತ್ತು. ಬಳಿಕ ಗಂಡು ಮಗು ಸರ್ಜಾ ಫ್ಯಾಮಿಲಿ ಸೇರಿದ್ದಾನೆ. ಈಗ ಇಬ್ಬರು ಮಕ್ಕಳಿಗೂ ಒಟ್ಟಿಗೆ ನಾಮಕರಣ ಮಾಡಿದ್ದಾರೆ. ರಾಮಾಯಣದಲ್ಲಿ ಬರೋ ಪವರ್ ಫುಲ್ ಹೆಸರು ಹಯಗ್ರೀವಾ ಅಂತ ಮಗನಿಗೆ ನಾಮಕರಣ ಮಾಡಿದ್ರೆ, ಮಗಳಿಗೆ ರುದ್ರಾಕ್ಷಿ ಎಂದು ಹೆಸರಿಟ್ಟಿದ್ದಾರೆ. ಧ್ರುವ ಸರ್ಜಾ ಮಗನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದಾರೆ. ʼಹಯʼ ಎಂದರೆ ಕುದುರೆ ಮತ್ತು ʼಗ್ರೀವʼ ಎಂದರೆ ಕತ್ತು. ಹೀಗಾಗಿ ಕತ್ತಿನಿಂದ ಮೇಲಕ್ಕೆ ಕುದುರೆಯ ಆಕಾರವನ್ನು ಹೊಂದಿರುವ ರೂಪವನ್ನು ಹಯಗ್ರೀವ ಎಂದು ಕರೆಯುತ್ತಾರೆ. ಇದು ವಿಷ್ಣುವಿನ ಮತ್ತೊಂದು ಅವತಾರ. ಹೀಗಾಗಿ ಅದೇ ವಿಷ್ಣುವಿನ ಹಯಗ್ರೀವ ಫೊಟೋ ಇಟ್ಟು ಹೆಸರು ರಿವೀಲ್ ಮಾಡಿದ್ರು.
ಇನ್ನು ಮಗಳಿಗೆ ರುದ್ರಾಕ್ಷಿ ಅಂತ ನಾಮಕರಣ ಮಾಡಿದ್ದು, ಶಿವನ ರುದ್ರಾಕ್ಷಿ ಫೋಟೋ ಜೊತೆ ಹೆಸರನ್ನ ರಿವಿಲ್ ಮಾಡಿದ್ರು. ಧ್ರುವ ಮಕ್ಕಳ ನಾಮಕರಣಲ್ಲಿ ಅತ್ಯಾತ್ಮೀಯ ಗೆಳೆಯರ ಬಳಗ ಹಾಗು ಕೆಲವು ಸಿನಿಮಾ ಮಂದಿ ಭಾಗವಹಿಸಿದ್ರು. ಅಧೀರ ಸಂಜಯ್ ದತ್ ಆಗಮಿಸಿ ಈ ನೇಮಿಂಗ್ ಸೆರ್ಮನಿ ಕಾರ್ಯಕ್ರಮದ ರಂಗು ಹೆಚ್ಚಿಸಿದ್ರು. ನಟ ಪ್ರೇಮ್ ರಕ್ಷಿತಾ ಸೇರಿದಂತೆ ಧ್ರುವ ಸರ್ಜಾ ನಟಿಸುತ್ತಿರೋ ಕೆಡಿ ಸಿನಿಮಾ ತಂಡ ಕೂಡ ಬಂದಿದ್ರು. ಧ್ರುವ ಸರ್ಜಾ ಮಗಳು ರುಕ್ರಾಕ್ಷಿಗೆ ಒಂದುವರೆ ವರ್ಷ. ಮಗ ಹಯಗ್ರೀವ ಡಿ ಸರ್ಜಾಗೆ 9 ತಿಂಗಳು ತಂಬಿದೆ. ಈಗ ಈ ಅಕ್ಕ ತಮ್ಮ ಇಬ್ಬರಿಗೂ ಒಂದೇ ದಿನ ನಾಮಕರಣ ಮಾಡಿದ್ದಾರೆ ಧ್ರುವ. ಈ ಮೂಲಕ ರಾಮ ಆಂಜನೇಯನ ಮೇಲಿನ ಭಕ್ತಿಯನ್ನ ಧ್ರುವ ಮಕ್ಕಳ ಮೇಲೂ ತೋರಿಸಿದ್ದಾರೆ.