Asianet Suvarna News Asianet Suvarna News

Abhishek Ambareesh: ಕಾಳಿಯಾಗಿ ಬರಲಿದ್ದಾನೆ ಜ್ಯೂ. ರೆಬೆಲ್ ಸ್ಟಾರ್: ಅಭಿಷೇಕ್ ಹೊಸ ಸಿನಿಮಾಗೆ ಮುಹೂರ್ತ ಫಿಕ್ಸ್

ಜ್ಯೂ. ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರ 'ಕಾಳಿ' ಎಂಬ ಹೊಸ ಸಿನಿಮಾಗೆ ಮುಹೂರ್ತಕ್ಕೆ ಫಿಕ್ಸ್ ಆಗಿದೆ.
 

ಅಭಿಷೇಕ್ ಅಂಬರೀಶ್ ಸುಕ್ಕಾ ಸೂರಿ ನಿರ್ದೇಶನದಲ್ಲಿ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮಾಡುತ್ತಿದ್ದಾರೆ. ಈಗ ಕಾಳಿ ಅವತಾರಕ್ಕೆ ಅಭಿ ತಯಾರಿ ಮಾಡುತ್ತಿದ್ದು, ಹೆಬ್ಬುಲಿ ಸಿನಿಮಾ ನಿರ್ದೇಶಕ ಎಸ್. ಕೃಷ್ಣ ಅಭಿಷೇಕ್'ರನ್ನು ಕಾಳಿಯನ್ನಾಗಿ ಮಾಡುತ್ತಿದ್ದಾರೆ. ಈ ಕಾಳಿ ಸಿನಿಮಾದ ಮುಹೂರ್ತ ಇಂದು ನಡೆಯಲಿದೆ. ಅಷ್ಟೆ ಅಲ್ಲ ಅಭಿಷೇಕ್ ನಿಶ್ಚಿತಾರ್ಥದ ಬಳಿಕ ಕಾಳಿ ಸಿನಿಮಾದ ಶೂಟಿಂಗ್ ಶುರುವಾಗುತ್ತೆ ಅಂತ ಕಾಳಿ ಚಿತ್ರತಂಡದ ಮೂಲಗಳು ಹೇಳಿವೆ. ಅಲ್ಲಿಗೆ ಅಭಿಷೇಕ್ ಎಂಗೇಜ್ಮೆಂಟ್ ಸುದ್ದಿ ಕಾಳಿಯಿಂದ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

Video Top Stories