Asianet Suvarna News Asianet Suvarna News

ಡೆವಿಲ್ 30 ದಿನಗಳ ಬ್ಯಾಂಕಾಕ್ ಶೆಡ್ಯೂಲ್‌ಗಾಗಿ 30 ಕೋಟಿ ಖರ್ಚು: ದರ್ಶನ್ ಸಿನಿಮಾ ನಿರ್ಮಾಪಕರಿಗೆ ಕೋಟಿಗಳ ಬರೆ!

ಇಲ್ಲೀವರೆಗೆ ಡೆವಿಲ್ ಶೇಕಡ 50 ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ನಿರ್ದೇಶಕ ಮಿಲನ ಪ್ರಕಾಶ್  ಡೆವಿಲ್ ಸಿನಿಮಾ ಆರಂಭದಲ್ಲೆ ತಮ್ಮ ಹೆಸರನ್ನೆ ಬದಲಾಯಿಸಿಕೊಂಡಿದ್ರು. ಇನ್ನೂ ಡೆವಿಲ್ ಸಿನಿಮಾ ಟೈಟಲ್ ಕೂಡ ನೆಗೆಟಿವ್ ಆಗಿತ್ತು. 

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಹಾಗೂ ಗ್ಯಾಂಗ್ ಜೈಲು ಸೇರಿದ್ದು ಇತ್ತ ಡೆವಿಲ್ ಸಿನಿಮಾದ ನಿರ್ಮಾಪಕರಿಗೆ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ದರ್ಶನ್ ಅಭಿನಯದ  ಡೆವಿಲ್ ಸಿನಿಮಾದ ನಿರ್ಮಾಪಕರಿಗೆ ನಷ್ಟದ ಮೇಲೆ ನಷ್ಟ ಬಂದಿದೆ.. ಈಗಾಗಲೆ ಸಿನಿಮಾದ ಮೇಲೆ ಕೋಟಿ ಕೋಟಿ ಸುರಿದ ನಿರ್ಮಾಪಕರು ಈಗ ಆಕಾಶ ನೋಡ್ತಾ ಕೂತಿದ್ದಾರೆ. ಯಾಕೆಂದರೆ ಡೆವಿಲ್ ಟೀಸರ್  ನೆಗೆಟೀವ್ ಆಗಿದ್ದರೂ ದರ್ಶನ್ ಅಭಿಮಾನಿ ವಲಯದಲ್ಲಿ  ಬಾರೀ ಹವಾ ಹುಟ್ಟುಹಾಕಿತ್ತು. ಇಲ್ಲೀವರೆಗೆ ಡೆವಿಲ್ ಶೇಕಡ 50 ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ನಿರ್ದೇಶಕ ಮಿಲನ ಪ್ರಕಾಶ್ ಡೆವಿಲ್ ಸಿನಿಮಾ ಆರಂಭದಲ್ಲೆ ತಮ್ಮ ಹೆಸರನ್ನೆ ಬದಲಾಯಿಸಿಕೊಂಡಿದ್ರು. ಇನ್ನೂ ಡೆವಿಲ್ ಸಿನಿಮಾ ಟೈಟಲ್ ಕೂಡ ನೆಗೆಟಿವ್ ಆಗಿತ್ತು. ಸಿನಿಮಾ ಆರಂಭದಿಂದಲೂ ಒಂದಲ್ಲಾ ಒಂದು ಅಡೆತಡೆ ಉಂಟಾಗುತ್ತಲೆ ಇತ್ತು. 

ದರ್ಶನ್ ಕೈಮುರಿದುಕೊಂಡ್ರು. ಪಬ್ ಗಲಾಟೆಯಲ್ಲಿ ವಿಚಾರಣೆಗಾಗಿ ಪೋಲೀಸ್ ಮೆಟ್ಟಿಲು ತುಳೀಯಬೇಕಾಯ್ತು. ಕಾಟೇರ ಸಕ್ಸಸ್ ತಲೆಗೇರುತ್ತಿದ್ದಂತೆ ಕಾರ್ಯಕ್ರಮಗಳಲ್ಲಿ ನಾಲಿಗೆ ಹಿಡಿತವಿಲ್ಲದ ದರ್ಶನ್ ಹೆಣ್ಣು ಮಕ್ಕಳ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿ ಹೆಂಗೆಳೆಯರ ಕೋಪಕ್ಕೆ ಗುರಿಯಾದರು... ಹೆಂಡತಿ ಗೆಳತಿಯರ ನಡುವಿನ ಜಗಳ ದರ್ಶನ್ ಮನಸ್ಸನ್ನು ಕೆಡಿಸಿತ್ತು. ಈಗ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋದದ್ದು. ಒಟ್ಟಿನಲ್ಲಿ ಡೆವಿಲ್ ಶುರುವಿನಿಂದಲೂ ದರ್ರಶನ್ಗೆ ಒಂದಲ್ಲಾ ಒಂದು ತೊಂದರೆಯೇ ಆಗಿದೆ. ಈಗ ಅರ್ಧ ಶೂಟಿಂಗ್ ಮುಗಿಸಿ ನಿರ್ಮಾಪಕನ ನಡುನೀರಿನಲ್ಲಿ ನಿಲ್ಲಿಸಿ ಕೈತೊಳೆದುಕೊಂಡಂತಾಗಿದೆ. ಆದರೆ ಎಲ್ಲವೂ ಸರಿಯಿದ್ದು ದರ್ಶನ್ ಜೈಲಿಗೆ ಹೋಗದಿದ್ದರೆ ಕತೆಯೇ ಬೇರೆ ಇತ್ತು. ಎಲ್ಲಾ ಸರಿಯಾಗಿದ್ದರೆ ಜೂನ್ 20 ಕ್ಕೆ ಡೆವಿಲ್ ಶೂಟಿಂಗ್ ಗಾಗಿ ಬ್ಯಾಂಕಾಕ್ ಹೋಗಬೇಕಿತ್ತು. 

ಬ್ಯಾಂಕಾಕ್ ಹೋಗಲು 60ಕ್ಕೂ ಹೆಚ್ಚಿನ ಜನರ ತಂಡಕ್ಕೆ ವಿಸಾ ಏರ್ ಟಿಕೆಟ್ ಬುಕ್ ಆಗಿತ್ತು. ನಿರ್ಮಾಪಕರ ಪ್ರಕಾಶ್ ಅವರು ಒಂದಷ್ಟು ಮಾತಿನ ಭಾಗ ಹಾಗೂ ಆಕ್ಷನ್ ಸೀಕ್ವೆನ್ಸ್ ಶೂಟ್ ಪ್ಲಾನ್ ಮಾಡಿದ್ದರು. ಒಟ್ಟು 30 ದಿನಗಳ ಶೆಡ್ಯೂಲ್ ಬ್ಯಾಂಕಾಕ್ ನಲ್ಲಿ ಪ್ಲಾನ್ ಆಗಿತ್ತು. ಈ ಶೆಡ್ಯೂಲ್ ಗಾಗಿಯೋ ಬರೋಬರಿ 30 ಕೋಟಿ ಬಜೆಟ್ ಇಡಲಾಗಿತ್ತು. ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಪಾಲದ ಹಿನ್ನೆಲೆ ಶೂಟಿಂಗ್ ಸ್ಟಾಪ್ ಆಗಿದೆ. ಫಾರಿನ್ ಶೂಟಿಂಗ್ ಕ್ಯಾನ್ಸಲ್ ಆದ ಹಿನ್ನೆಲೆ ನಿರ್ಮಾಪಕ ಪ್ರಕಾಶ್ ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಈಗ ದರ್ಶನ್ ಯಾವಾಗ ಜೈಲಿನಿಂದ ಹೊರ ಬರ್ತಾರೆ ಅನ್ನೋದೆ ಗೊತ್ತಿಲ್ಲ. ಮತ್ತೆ ಡೆವಿಲ್ ಶುರು ಮಾಡೊದ್ಯಾವಾಗ ಅನ್ನೋ ಅತಂಕದಲ್ಲಿ ನಿರ್ಮಾಪಕ ಪ್ರಕಾಶ್ ಇದ್ದಾರೆ. ಅಂತೂ ಅವರಿಗೆ ಮತ್ತೊಮ್ಮೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.  ದರ್ಶನ್ ಸಂಭಾವನೆಯೇ 22 ಕೋಟಿ ಎನ್ನಲಾಗಿದೆ. ಇದರ ಜೊತೆಗೆ ಸಿನಿಮಾ ಬಜೆಟ್  40 ಕೋಟಿ ಎನ್ನಲಾಗಿದೆ. ಒಟ್ಟಿನಲ್ಲಿ ದರ್ಶನ್  ಕೊಲೆ ಕೇಸ್ನಲ್ಲಿ ಸಿಕ್ಕಾಕ್ಕೊಂಡದ್ದರಿಂದ ಡೆವಿಲ್  ನಿರ್ಮಾಪಕರಿಗೆ ಏನೂ ತೋಷದಂತಾಗಿರೋದಂತು ನಿಜ.

Video Top Stories