Asianet Suvarna News Asianet Suvarna News

ಬಿಗ್ ಬಾಸ್ ವಿನ್ನರ್ ಪ್ರಥಮ್‌ಗೂ ಡ್ರಗ್ಸ್‌ಗೂ ಏನ್ ಸಂಬಂಧ?

ಸಿನಿಮಾ ಹೆಸರೇ ನೋ ಕೊಕೇನ್ 25 ವರ್ಷಗಳ ಆಕ್ಷನ್ ಅನುಭವ ಇರುವ ನಿರ್ದೇಶಕ ಕೌರವ ವೆಂಕಟೇಶ್ ನಿರ್ದೇಶನದ ಸಿನಿಮಾ ಇದೆ. ಬಿಗ್ ಬಾಸ್ ವಿನ್ನರ್ ನಟ ಭಯಂಕರ ಕೌರವ ವೆಂಕಟೇಶ್ ನಿರ್ದೇಶನದ ಸಿನಿಮಾ ನೊ ಕೊಕೇನ್.

ಸಿನಿಮಾ ಹೆಸರೇ ನೋ ಕೊಕೇನ್ 25 ವರ್ಷಗಳ ಆಕ್ಷನ್ ಅನುಭವ ಇರುವ ನಿರ್ದೇಶಕ ಕೌರವ ವೆಂಕಟೇಶ್ ನಿರ್ದೇಶನದ ಸಿನಿಮಾ ಇದೆ. ಬಿಗ್ ಬಾಸ್ ವಿನ್ನರ್ ನಟ ಭಯಂಕರ ಕೌರವ ವೆಂಕಟೇಶ್ ನಿರ್ದೇಶನದ ಸಿನಿಮಾ ನೊ ಕೊಕೇನ್. ಕನ್ನಡದಲ್ಲಿ ಭಯಂಕರ ಆಕ್ಷನ್ ಸಿನಿಮಾ ಮಾಡೋಕೆ ಸಜ್ಜಾಗಿದೆ ಈ ಟೀಮ್. ಸದ್ಯಕ್ಕೆ ಮುಹೂರ್ತವಾಗಿದೆ. ಸ್ವತಃ ಕತೆ ಚಿತ್ರಕತೆ ಮಾಡಿ ನಾಯಕರಾಗಿದ್ದಾರೆ ಪ್ರಥಮ್. ನೋ ಕೊಕೇನ್ ಸಿನಿಮಾದಲ್ಲಿ ಭರ್ಜರಿ ಕಲಾವಿದರ ದಂಡೆ ಇದೆ. ಬಿ.ಸಿ ಪಾಟೀಲ್,ಶಶಿಕುಮಾರ್ ರವಿಕಾಳಿ, ಓಂಪ್ರಕಾಶ್ ರಾವ್, ಮುನಿ ,ಶೋಭರಾಜ್, ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪರಭಾಷಾ ನಟಿ ಆರ್ನಾ ಅನ್ನೋರು ಚಿತ್ರದ ನಾಯಕಿಯಾಗಿದ್ದಾರೆ. 

400 ಕೋಟಿ ಕೊಕೇನ್ ಅನ್ನು ಹಲವು ರಾಜ್ಯಗಳನ್ನ  ದಾಟಿಸಿ ಕರ್ನಾಟಕ ಎಂಟರ್ ಆದಾಗ ಪೋಲೀಸ್, ಇಂಟೆಲಿಜೆನ್ಸ್ ಎಲ್ಲವೂ ಫೈಲ್ಯೂರ್ ಆದಾಗಾ ಕಾಮಿಡಿ ಕಪಲ್ ಅದನ್ನು ಹೇಗೆ ಡೆಸ್ಟ್ರಾಯ್ ಮಾಡ್ತಾರೆ ಅನ್ನೋದೆ ಸಿನಿಮಾದ ಒನ್ಲೈನ್ ಸ್ಟೋರಿಯಾಗಿದೆ. ಡ್ರಗ್ ಗೂ ಪ್ರಥಮ್ ಗೂ ಏನ್ ಸಂಬಂಧ..? ಆಕ್ಷನ್ ಸಿನಿಮಾನೂ ಪ್ರಥಮ್ ಮಾಡಬಲ್ಲರಾ ಅಂತ ನೀವು ಕೇಳಬಹುದು. ಇದೊಂದು ಕಾಮಿಡಿ ಆಕ್ಷನ್ ಥ್ರಿಲ್ಲರ್ ಆಗಿದ್ದು.. ಮುಹೂರ್ಥ ಮುಗಿಸಿರೋ ನೋ ಕೊಕೇನ್ ಸಿನಿಮಾ ಸದ್ಯ ಆಕ್ಷನ್ ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದೆ. ನೋ ಕೊಕೇನ್ ಕೆಳಗೆ ಡಫಿನೀಷನ್ ಆಫ್ ಪೇಟ್ರಿಯಾಟಿಸಂ ಅಂತ ಕ್ಯಾಪ್ಷನ್ ಕೂಡ ಇದೆ. ಸಿನಿಮಾ ಹೇಗೆ ಮೂಡಿಬರುತ್ತೆ ಅನ್ನೋದನ್ನ ಕಾದು ನೋಡೋಣ.

Video Top Stories