Asianet Suvarna News Asianet Suvarna News

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು, ಒಂದು ಶೂಟೌಟ್​​.. ಮೂರು ಕಾರಣಗಳು!

ಕಾಂಪ್ರಮೈಸ್​​​ ಮಾಡಲು ಹೋಗಿದ್ದೇ ತಪ್ಪಾಯ್ತಾ..? ಒಂದು ಶೂಟೌಟ್​​.. ಮೂರು ಕಾರಣಗಳು..! ಮುಖ್ಯಮಂತ್ರಿ ಬಂದ ದಿನವೇ ನಡೆದಿತ್ತು ಪೈರಿಂಗ್..!‌ ಡ್ರಾಪ್​​ ಕೇಳಿದವನೇ ಗುಂಡು ಹಾರಿಸಿದ್ದ..!

ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ವಿಜಯಪುರ ಜಿಲ್ಲೆಯಲ್ಲಿ ಹಂತಕರ ಅಟ್ಟಹಾಸ ತಣ್ಣಗಾಯ್ತು ಎನ್ನುವಾಗಲೇ ಭೀಮೆಗೆ ಬಿಸಿರಕ್ತದ ತರ್ಪಣವಾಗಿದೆ. ಕಂಟ್ರಿಮೇಡ್‌ ಪಿಸ್ತೂಲಿನಿಂದ ಸಿಡಿದ ಅನಾಹುತಕಾರಿ ಗುಂಡು ಪಟ್ಟಣ ಪಂಚಾಯ್ತಿ ಸದಸ್ಯೆ ಗಂಡನ ಬೆನ್ನು ಸೀಳಿದೆ. ಸಿಎಂ ಸಿದ್ದರಾಮಯ್ಯ ಭೀಮಾತೀರದ ಚಡಚಣ ತಾಲೂಕಿಗೆ ಬಂದಾಗಲೇ ಅದೆ ಭಾಗದಲ್ಲಿ ಹಂತಕರು ಅಟ್ಟಹಾಸ ಮೆರೆದಿದ್ದು, ಈ ಭಾಗದಲ್ಲಿ ಮತ್ತೆ ತಲ್ಲಣ ಸೃಷ್ಟಿಯಾಗಿದೆ. ಅಷ್ಟಕ್ಕೂ ಮುಖ್ಯಮಂತ್ರಿ ಇದ್ದ ಊರಲ್ಲೇ ಆದ ಶೂಟೌಟ್​​​ ಕಹನಿ ಏನು..? ಈ ಬಾರಿ ಗುಂಡು ತಿಂದವನು ಯಾರು..? ಪ್ರಾಣಬಿಟ್ಟವನ್ಯಾರು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್‌ ಐ ಆರ್‌..

Video Top Stories