Asianet Suvarna News Asianet Suvarna News

ಕಾಂಗ್ರೆಸ್ ಕೋಟೆಯೊಳಗೆ ಮತ್ತೆ ಮುನ್ನಲೆಗೆ ಬಂತು ಅಧಿಕಾರ ಹಂಚಿಕೆ ಫೈಟು; ಹೈಕಮಾಂಡ್ ಹಿಡೆನ್ ಅಜೆಂಡಾವೇನು ಗೊತ್ತಾ?

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪುನಃ ಉಪ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆಯ ಫೈಟು ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಿಡೆನ್ ಅಜೆಂಡಾ ಏನಿದೆ ಗೊತ್ತಾ?

ಬೆಂಗಳೂರು (ಜೂ.27):  ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲಿಯೇ ಪುನಃ ಮೂವರು ಉಪಮುಖ್ಯಮಂತ್ರಿ ಅಧಿಕಾರದ ಗಲಾಟೆ ಜೋರಾಗಿದೆ. ಸ್ವಾಮೀಜಿಯೊಬ್ಬರು ಸಿದ್ದರಾಂಯ್ಯ ಮುಖ್ಯಮಂತ್ರಿ ಪಟ್ಟವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ. ಮತ್ತೊಂದೆಡೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೂ ಪೈಪೋಟಿ ಆರಂಭವಾಗಿದ್ದು, ನೇರವಾಗಿ ನಾಯಕರ ನಡುವೆ ಕೆಸರೆರಚಾಟ ಆರಂಭವಾಗಿದೆ. ಆದರೆ, ಇದರಲ್ಲಿ ಎರಡು ಬಣಗಳು ಇರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದು, ಇಬ್ಬರೂ ನಾಯಕರ ಆಪ್ತರು ಏನೇನು ಹೇಳಿದ್ದಾರೆ ಎಂಬುದು ಇಲ್ಲಿದೆ ನೋಡಿ..

ಕಾಂಗ್ರೆಸ್ ಸರ್ಕಾರದಲ್ಲಿ ಭುಗಿಲೆದ್ದು ನಿಂತ ಡಿಸಿಎಂ ಸಂಘರ್ಷ.. ಡಿಸಿಎಂ ಯುದ್ಧದಲ್ಲಿ ನುಗ್ಗಿ ಬಂದು ಸಿಎಂ ಬದಲಾವಣೆಯ ಬಾಣ. ತ್ರಿವಳಿ ಡಿಸಿಎಂ ಪಟ್ಟು ಹಾಕಿದ ಹಳೇ ಪೈಲ್ವಾನ್‌ಗಳಿಗೆ ಸಿಎಂ ಪಟ್ಟದ ಗುಟ್ಟು ಬಿಚ್ಚಿಟ್ಟ ಹೊಸ ಪೀಳಿಗೆಯ ಶಾಸಕ. ಸಿಎಂ ಬಣದವರಿಂದ ಚದುರಂಗಾಟ, ಡಿಕೆ ಬಣದವರಿಂದ ಪಗಡೆಯಾಟ. ಆಟ ಶುರು ಮಾಡಿದ್ದು ನೀವು, ಆಟ ಮುಗಿಸೋರು ನಾವು ಅಂದವರು ಯಾರು..? ಡಿಸಿಎಂ ವ್ಯೂಹ ಹೆಣೆದವರತ್ತ ಸಿಎಂ ಬಾಣ.. ಏನಿದರ ಗುಟ್ಟು..? ಕಾಂಗ್ರೆಸ್ ಕೋಟೆಯೊಳಗಿನ ಮರ್ಮಯುದ್ಧದ ಆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಸಿದ್ದರಾಮಯ್ಯ ಎದುರಲ್ಲೇ ಡಿಕೆಶಿಯನ್ನು ಸಿಎಂ ಮಾಡುವಂತೆ ಆಗ್ರಹಿಸಿದ ಒಕ್ಕಲಿಗ ಸ್ವಾಮೀಜಿ

ತ್ರಿವಳಿ ಡಿಸಿಎಂ ಬೇಕು ಅನ್ನೋದಾದ್ರೆ, ಸಿಎಂ ಚೇಂಜ್ ಆಗ್ಲಿ ಅನ್ನೋದು ಡಿಕೆಶಿ ಬಣದ ಶಾಸಕರ ಒತ್ತಾಯ. ಹಾಗಾದ್ರೆ ತೆರೆಯ ಹಿಂದೆ ನಡೆದಿದೆ ಎನ್ನಲಾಗ್ತಿರೋ ಒಪ್ಪಂದದ ಗುಟ್ಟು ಈ ಮೂಲಕ ರಟ್ಟಾಯ್ತಾ..?  ಎರಡೂವರೆ ವರ್ಷಗಳ ನಂತ್ರ ಕಾಂಗ್ರೆಸ್ ಪಾಳೆಯದಲ್ಲಿ ಬಿರುಗಾಳಿ ಏಳೋದು ಗ್ಯಾರಂಟಿನಾ..? ಹೆಚ್ಚುವರಿ ಡಿಸಿಎಂ ಬೇಕು ಅನ್ನೋರಿಗೆ ಬೈ ಎಲೆಕ್ಷನ್ ಗೆಲ್ಲಿಸುವ ಟಾಸ್ಕ್ ನೀಡಿ ಅಂದಿದ್ದು ಯಾರು..? ಡಿಸಿಎಂ ಕುರ್ಚಿ ಬೇಕು ಅನ್ನೋದಾದ್ರೆ, ಸಿಎಂ ಪಟ್ಟವನ್ನು ಡಿಕೆಶಿಗೆ ಬಿಟ್ಟು ಕೊಡಲಿ ಅಂತ ಬಂಡೆ ಬಣದ ಶಾಸಕರ ಪ್ರತಿ ಪಟ್ಟು. ಹಾಗಾದ್ರೆ ತೆರೆಯ ಹಿಂದೆ ನಡೆದಿದೆ ಎನ್ನಲಾಗ್ತಿರೋ ಒಪ್ಪಂದದ ಗುಟ್ಟು ಈ ಮೂಲಕ ರಟ್ಟಾಯ್ತಾ..?  ಎರಡೂವರೆ ವರ್ಷಗಳ ನಂತ್ರ ಕಾಂಗ್ರೆಸ್ ಪಾಳೆಯದಲ್ಲಿ ಬಿರುಗಾಳಿ ಏಳೋದು ಗ್ಯಾರಂಟಿನಾ..? ಎಂದು ಕೇಳಿದ್ದಾರೆ.

ಡಿಸಿಎಂ ದಂಗಲ್'ನ ಸೂತ್ರಧಾರ ಸಚಿವ ಕ್ಯಾತ್ಸಂದ ರಾಜಣ್ಣ, ಮತ್ತೊಂದು ಕ್ಯಾತೆ ತೆಗೆದಿದ್ದಾರೆ. ಇದೂ ಕೂಡ ಡಿಸಿಎಂ ಡಿಕೆಶಿ ವಿರುದ್ಧವೇ ರಾಜಣ್ಣ ತೆಗೆದಿರೋ ಕ್ಯಾತೆ.. ಸಿದ್ದರಾಮಯ್ಯ ಸಂಪುಟದ ಸಹಕಾರ ಸಚಿವ ಕ್ಯಾತ್ಸಂದ್ರ ರಾಜಣ್ಣ ಡಿಸಿಎಂ ಕ್ಯಾತೆ ತೆಗೆದ ಮೊದಲಿಗ. ತ್ರಿವಳಿ ಡಿಸಿಎಂ ಕಿಚ್ಚು ಹೊತ್ತಿಸಿದ್ದ ರಾಜಣ್ಣ ಈಗ ಮತ್ತೊಂದು ಕ್ಯಾತೆ ತೆಗೆದಿದ್ದಾರೆ. ಇಲ್ಲೂ ಕೂಡ ರಾಜಣ್ಣ ಟಾರ್ಗೆಟ್ ಡಿಸಿಎಂ ಡಿಕೆ ಶಿವಕುಮಾರ್ ಆಗಿದ್ದಾರೆ.

Video Top Stories