Asianet Suvarna News Asianet Suvarna News

ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ? ಡಿಕೆ ಶಿವಕುಮಾರ್ ಪ್ರಶ್ನೆ

ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ? ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿ, (ಅ.03)  : ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ? ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ.

ಡ್ರಗ್ ಕೇಸ್: ಮಾಜಿ ಸಿಎಂ ಹಾಗೂ ಅವರ ಮಗನಿಗೆ ಕಾಲ್ ಮಾಡಿ ನೆರವು ಕೇಳಿದ್ರಾ ಅನುಶ್ರೀ?

ಅವರು ಇಂದು ನಗರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮವದರ ಜೊತೆಗೆ ಮಾತನಾಡುತ್ತ ಡ್ರಗ್ಸ್‌ ವಿಚಾರದಲ್ಲಿ ಕೇಳಿ ಬರುತ್ತಿರುವ ನಟಿ ಹಾಗೂ ನಿರೂಪಕಿ ಅನುಶ್ರಿಯವರು ದೊಡ್ಡ ದೊಡ್ಡ ರಾಜಕಾರಣಿಗಳಿಂದ ಬಚಾವ್‌ ಆಗುತ್ತಿದ್ದಾರೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು ನಶೆ-ಪಶೆ ಎಲ್ಲಾ ಗೊತ್ತಿಲ್ಲ. ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ?, ಇವರೇನಾ ತಗೊಂಡಿರೋದು?, ಟಿವಿಯಲ್ಲಿ ಬರೀ ಸಿನಿಮಾ ರಂಗದರವನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ ಅಂತ ಹೇಳಿದರು.

Video Top Stories