ಕುಮಾರಸ್ವಾಮಿ ದ್ವಿಪತ್ನಿತ್ವ ಕೆದಕಿದ ಬಿಜೆಪಿ ವಿರುದ್ಧ ಹರಿಹಾಯ್ದ ಶರವಣ
* ರಾಜ್ಯದಲ್ಲಿ ನಿಮಗೆ ಒಂದು ದಿನಾನು ರಾಜ್ಯದ ಜನತೆ ಸ್ಪಷ್ಟಬಹುಮತ ಕೊಟ್ಟಿಲ್ಲ
* ಕುಮಾರಸ್ವಾಮಿ ದ್ವಿಪತ್ನಿತ್ವ ಕೆದಕಿದ ಬಿಜೆಪಿ
* ಬಿಜೆಪಿ ವಿರುದ್ಧ ಕಿಡಿಕಾರಿದ ಶರವಣ
ಬೆಂಗಳೂರು(ಅ.20): ಬಿಜೆಪಿ ನಾಯಕರುಗಳು ತಮ್ಮ ಬೆನ್ನ ಹಿಂದೆ ಏನೇನ್ ಇದೆ ಅನ್ನೋದನ್ನ ನಮ್ಮ ಮುಂದೆ ಹೇಳುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಲಿ ಅಂತ ಜೆಡಿಎಸ್ ಮುಖಂಡ ಟಿ.ಎ. ಶರವಣ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನಾಯಕರು ತಮ್ಮ ಟ್ವಿಟ್ಟರ್‌ನಲ್ಲಿ ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಎಲ್ಲಕ್ಕಿಂದ ಮುಖ್ಯವಾಗಿ ಕುಮಾರಸ್ವಾಮಿ ಅವರ ದ್ವಿಪತ್ನಿತ್ವದ ಬಗ್ಗೆ ಬರೆದುಕೊಂಡಿದ್ದಾರೆ. ಸಿಗ್ನಲ್ ಜಂಪ್ ನಿಮ್ಮ ಆದ್ಯ ಕರ್ತವ್ಯವಾಗಿದ್ದು ನೀವು ಇದನ್ನ ರಾಜ್ಯ ಮಾಡಿಕೊಂಡು ಬರ್ತಾ ಇದ್ದೀರಾ. ರಾಜ್ಯದಲ್ಲಿ ನಿಮಗೆ ಒಂದು ದಿನಾನು ಕೂಡ ಈ ರಾಜ್ಯದ ಜನತೆ ಸ್ಪಷ್ಟಬಹುಮತ ಕೊಟ್ಟಿಲ್ಲ ಅಂತ ಬಿಜೆಪಿ ವಿರುದ್ಧ ಶರವಣ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್: ಕಟೀಲ್ ಹೇಳಿಕೆಗೆ ಬಿಜೆಪಿ ಸಮರ್ಥನೆ