"ಲೋಕ"ಯುದ್ಧ ಗೆದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರಾ..?
"ಯತೀಂದ್ರ ಆಸೆ ಪಡೋದು ತಪ್ಪಲ್ಲ ಬಿಡಿ" ಅಂದ್ರು ಡಿಸಿಎಂ ಡಿಕೆಶಿ..!
ಲೋಕಸಭೆ ಫಲಿತಾಂಶದಲ್ಲಿ ನಿಂತಿದ್ಯಾ ಸಿದ್ದು ಸಿಂಹಾಸನ ಭವಿಷ್ಯ..?
ಮಹಾಭಾರತ ಯುದ್ಧ ಗೆದ್ದರೆ ಸಿದ್ದು ಸಿಂಹಾಸನಕ್ಕಿಲ್ವಾ ಸಂಚಕಾರ..?
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 8 ತಿಂಗಳಾಗ್ತಾ ಬಂತು. ಈ ಎಂಟು ತಿಂಗಳುಗಳ ಅತೀ ಹೆಚ್ಚು ಸದ್ದು ಮಾಡಿದ ವಿಷ್ಯ ಯಾವುದು ಹೇಳಿ..? ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದು. ಸಿದ್ದರಾಮಯ್ಯನವರು(Siddaramaiah) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣವೇ ಎದ್ದು ನಿಂತಿದ್ದ ಪ್ರಶ್ನೆಯಿದು . ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ, ನಂತ್ರ ಡಿಕೆಶಿ ಮುಖ್ಯಮಂತ್ರಿಯಾಗ್ತಾರೆ ಅನ್ನೋದು ಒಂದು ಗುಂಪಿನ ವಾದ. ಇಲ್ಲ ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ. ಇದು ಮತ್ತೊಂದು ಗುಂಪಿನ ವಾದ. ಈ ವಾದ-ಪ್ರತಿವಾದಗಳಿಗೆ ತುಪ್ಪ ಸುರಿದು ಬೆಂಕಿ ಧಗಧಗಿಸುವಂತೆ ಮಾಡಿದವ್ರೂ ಇದ್ದಾರೆ. ಈಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರನೇ ಸಿಎಂ ಸಿಂಹಾಸನದ ಬಗ್ಗೆ ಸ್ಫೋಟಕ ಮಾತೊಂದನ್ನು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Congress) ರಾಜ್ಯದಲ್ಲಿ ಒಳ್ಳೆ ಫಲಿತಾಂಶವನ್ನು ಕೊಟ್ರೆ, ಮುಂದಿನ ಐದೂ ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರ್ತಾರಂತೆ. ಹಾಸನ ಜಿಲ್ಲೆ. ಹೊಳೆನರಸೀಪುರ ತಾಲೂಕಿನ ಅಣ್ಣೆಚಾಕನಹಳ್ಳಿಯಲ್ಲಿ ಮಂಗಳವಾರ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮವೊಂದರಲ್ಲಿ ಮಾತಾಡ್ತಾ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಹೇಳಿರೋ ಮಾತಿದು. ಲೋಕಸಭಾ ಚುನಾವಣೆಯಲ್ಲಿ(Loksabha) ಕಾಂಗ್ರೆಸ್ ಒಳ್ಳೇ ಸಾಧನೆ ಮಾಡಿದ್ರೆ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ ಅಂತ ಯತೀಂದ್ರ ಸಿದ್ದರಾಮಯ್ಯ ಹೇಳಿದ್ರೆ, ಇನ್ನು ಆರು ತಿಂಗಳು ಅಥವಾ ಒಂದು ವರ್ಷದೊಳಗೆ ಸಿದ್ದರಾಮಯ್ಯರನ್ನ ಸಿಎಂ ಕುರ್ಚಿಯಿಂದ ಇಳಿಸ್ತಾರೆ ನೋಡ್ತಿರಿ ಅಂದಿದ್ದಾರೆ ಪ್ರತಿಪಕ್ಷ ನಾಯಕ ಆರ್.ಅಶೋಕ್.
ಇದನ್ನೂ ವೀಕ್ಷಿಸಿ: ಕರ್ನಾಟಕದಲ್ಲಿ ಪ್ರಭು ಶ್ರೀರಾಮನ ಹೆಜ್ಜೆ ಗುರುತು, ಸೀತೆಯನ್ನು ಹುಡುಕಿ ಬಂದ ರಾಮನ ಕುರುಹುಗಳು..!