Tender Scam: ಸರ್ಕಾರದ ವಿರುದ್ಧ ಕಾಂಗ್ರೆಸ್ ಹೊಸ ಬಾಂಬ್‌: ಮಂತ್ರಿ ಸ್ಥಾನ ಸಿಗದವರಿಗೆ ಟೆಂಡರ್?

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೆಂಡರ್‌ ಬಾಂಬ್‌ ಹಾಕಿದ್ದು, ಹೆಚ್ಚು ಕಮಿಷನ್‌ ಕೊಟ್ಟವರಿಗೆ ಟೆಂಡರ್‌ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
 

First Published Feb 15, 2023, 3:15 PM IST | Last Updated Feb 15, 2023, 3:49 PM IST

ಅಸಮಾಧಾನಿತರ ಸಮಾಧಾನಕ್ಕೆ ಬಿಜೆಪಿ ಸರ್ಕಾರ ಟೆಂಡರ್‌ ಕಾರ್ಡ್‌ ಪ್ಲೇ ಮಾಡಿದೆಯಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಭಿರ ಆರೋಪ ಮಾಡಿದೆ. ಮಂತ್ರಿ ಸ್ಥಾನ ಸಿಗದವರಿಗೆ ಟೆಂಡರ್ ಸಿಗುತ್ತದೆಯಂತೆ. ಅಸಮಾಧಾನಿತ ನಾಯಕರಿಗೆ 1 ಸಾವಿರದಿಂದ 2 ಸಾವಿರ ಕೋಟಿ ರೂ. ಟೆಂಡರ್‌ ನೀಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. ಬೇಕಾದ ಗುತ್ತಿಗೆದಾರರಿಗೆ ಟೆಂಡರ್‌ ಕೊಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ, ನಮ್ಮ ಬಳಿ ದಾಖಲೆಗಳಿವೆ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ತಿಳಿಸಿದೆ. 20 ಸಾವಿರ ಅಧಿಕ ಪೆಂಡಿಂಗ್‌ ಬಿಲ್‌ಗಳಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಹೆಚ್ಚು ಕಮಿಷನ್‌ ಕೊಟ್ಟವರಿಗೆ ಟೆಂಡರ್‌ ನೀಡುತ್ತಿದ್ದಾರೆ, ಅವರಿಗೆ ಬೇಕಾದ ಕಂಟ್ರಾಕ್ಟರ್‌ಗಳಿಗೆ ಟೆಂಡರ್‌ ನೀಡ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.