Asianet Suvarna News Asianet Suvarna News

ಇದು ಭಾವನಾತ್ಮಕವಲ್ಲ, ಸಾರ್ಥಕ ದಿನ: ಬಿಎಸ್‌ವೈ ರಾಜೀನಾಮೆ ಬಗ್ಗೆ ಪುತ್ರಿ ಮಾತು!

ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ಬೆಂಬಲಿಗರಿಗೆ ಆಘಾತವಾಗಿದೆ. ಈ ನಡುವೆ ಮಾಡಒಂದೆಡೆ ಅವರ ವಿರೋಧಿ ಬಣ ಖುಷಿ ಪಡುತ್ತಿದ್ದರೆ, ವಿರೋಧ ಪಕ್ಷಗಳು ತಮ್ಮ ಮುಂದಿನ ನಡೆ ಬಗ್ಗೆ ಯೋಜನೆ ರೂಪಿಸಿಕೊಳ್ಳುತ್ತಿವೆ. ಹೀಗಿರುವಾಗ ಬಿಎಸ್‌ವೈ ರಾಜೀನಾಮೆ ಬಗ್ಗೆ ಅವರ ಪುತ್ರಿ ಅರುಣಾ ದೇವಿ ಮಾತನಾಡಿದ್ದು, ತಂದೆ ರಾಜೀನಾಮೆಯಿಂದ ಭಾವುಕಾಗಿಲ್ಲ, ಇದು ಸಾರ್ಥಕತೆ ದಿನದಂತೆ ಎಂದಿದ್ದಾರೆ.

ಬೆಂಗಳೂರು(ಜು.26): ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ಬೆಂಬಲಿಗರಿಗೆ ಆಘಾತವಾಗಿದೆ. ಈ ನಡುವೆ ಮಾಡಒಂದೆಡೆ ಅವರ ವಿರೋಧಿ ಬಣ ಖುಷಿ ಪಡುತ್ತಿದ್ದರೆ, ವಿರೋಧ ಪಕ್ಷಗಳು ತಮ್ಮ ಮುಂದಿನ ನಡೆ ಬಗ್ಗೆ ಯೋಜನೆ ರೂಪಿಸಿಕೊಳ್ಳುತ್ತಿವೆ. ಹೀಗಿರುವಾಗ ಬಿಎಸ್‌ವೈ ರಾಜೀನಾಮೆ ಬಗ್ಗೆ ಅವರ ಪುತ್ರಿ ಅರುಣಾ ದೇವಿ ಮಾತನಾಡಿದ್ದು, ತಂದೆ ರಾಜೀನಾಮೆಯಿಂದ ಭಾವುಕಾಗಿಲ್ಲ, ಇದು ಸಾರ್ಥಕತೆ ದಿನದಂತೆ ಎಂದಿದ್ದಾರೆ.

ಬಿಎಸ್‌ವೈ ಪದತ್ಯಾಗ ಬಿಜೆಪಿಗೆ ನಡುಕ, ಕಾಂಗ್ರೆಸ್‌-ಜೆಡಿಎಸ್‌ಗೆ ಸುವರ್ಣಾವಕಾಶ!

ಹೌದು ತಮ್ಮ ತಂದೆಯದ್ದು ಹೋರಾಟದ ಬದುಕು. ಈ ಮೂಲಕ ಮುಖ್ಯಮಂತ್ರಿಯಾಗಿ ಇಡೀ ದೇಶಕ್ಕೆ ಮಾದರಿಯಾಗುವ ಸರ್ಕಾರ ಕೊಟ್ಟು ಇಂದು ಮುಂದಿನವರೆಗಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಅವರು ಇಂದು ಭಾಷಣದ ವೇಳೆ ದುಃಖ ಹೊರ ಹಾಕಿದ್ದಲ್ಲ. ಸಮಾಜ ತನ್ನೊಂದಿಗಿದೆ. ನಾನು ಸಾರ್ಥಕ ಕೆಲಸ ಮಾಡಿ, ಬದುಕಿನಲ್ಲಿ ಇಂತಹ ಅವಕಾಶ ಸಿಕ್ಕಿದೆ ಎಂಬ ಸಂತೋಷ ಹಂಚಿಕೊಂಡಿದ್ದಾರೆ ಎಂದಿದ್ದಾರೆ.