ಮತ್ತೆ ಖಾತೆ ಅದಲು-ಬದಲು; ಹಿಂದಿರುವ ಸಿಎಂ ಲೆಕ್ಕಾಚಾರವೇನು..?
Jan 25, 2021, 1:10 PM IST
ಬೆಂಗಳೂರು (ಜ. 25): ಡಾ. ಸುಧಾಕರ್ ಒತ್ತಡಕ್ಕೆ ಮಣಿದ ಸಿಎಂ, ಖಾತೆಯನ್ನು ಅದಲು ಬದಲು ಮಾಡಲು ಮುಂದಾಗಿದ್ದಾರೆ. ಆರೋಗ್ಯ ಹಾಗೂ ವೈದ್ಯಕೀಯ ಖಾತೆಯನ್ನು ಒಟ್ಟಿಗೆ ಇಡಬೇಕು ಎಂದು ಡಾ. ಸುಧಾಕರ್ ಒತ್ತಾಯಿಸಿದ್ದರು. ಅದರಂತೆ ಅವರಿಗೆ ವೈದ್ಯಕೀಯ ಖಾತೆಯನ್ನೂ ನೀಡಲು, ಸಿಎಂ ನಿರ್ಧರಿಸಿದ್ದಾರೆ. ಮಾಧುಸ್ವಾಮಿಗೆ ನೀಡಲಾಗಿದ್ದ ವೈದ್ಯಕೀಯ ಖಾತೆಯನ್ನು ಸುಧಾಕರ್‌ಗೆ ನೀಡಲಾಗಿದ್ದು, ಮಾಧುಸ್ವಾಮಿಗೆ ಪ್ರವಾಸೋದ್ಯಮ ಖಾತೆ ನೀಡಲಾಗಿದೆ.
ಒತ್ತಡಕ್ಕೆ ಮಣಿದ ಸಿಎಂ, ಮತ್ತೆ ಖಾತೆ ಬದಲಾವಣೆ, ಯಾರ ಹೆಗಲಿಗೆ ಯಾವ ಖಾತೆ..?
ಕೋವಿಡ್ ಸಂದರ್ಭದಲ್ಲಿ ಸಮನ್ವಯದ ಕೊರತೆಯಿಂದ ಸಮಸ್ಯೆ ಎದುರಾಗಿತ್ತು. ಹಾಗಾಗಿ ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ಸುಧಾಕರ್‌ಗೆ ನೀಡಲಾಗಿತ್ತು. ವೈದ್ಯಕೀಯ ಹಾಗೂ ಆರೋಗ್ಯ ಖಾತೆಯನ್ನು ಸುಧಾಕರ್ ಸಮರ್ಥವಾಗಿ ನಿಭಾಯಿಸಿದ್ದರು. ಮುಂದೆ ಸಮನ್ವಯದ ಸಮಸ್ಯೆ ಎದುರಾಗಬಾರದೆಂದು ಮಾಧುಸ್ವಾಮಿ ಬಳಿಯಿದ್ದ ವೈದ್ಯಕೀಯ ಖಾತೆಯನ್ನು ಮತ್ತೆ ಸುಧಾಕರ್‌ಗೆ ನೀಡಲಾಗಿದೆ.