Asianet Suvarna News Asianet Suvarna News

INDIA ವಿಪಕ್ಷ ಮೈತ್ರಿ ಕೂಟದ ಚುನಾವಣೆ ಕಸರತ್ತು, NDA ಸಭೆ ಮೂಲಕ ಬಿಜೆಪಿ ಠಕ್ಕರ್!

ವಿಪಕ್ಷ ಮೈತ್ರಿ ಕೂಟಕ್ಕೆ ಹೊಸ ಹೆಸರು, ಇತ್ತ  NDA ಸಭೆಯಲ್ಲಿ ಕಾಂಗ್ರೆಸ್ ಹಾಗೂ ವಿಪಕ್ಷ ಮೈತ್ರಿ ವರುದ್ದ ಮೋದಿ ಗುಡುಗು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಂದಿರುವ ಸವಾಲು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಬೆಂಗಳೂರಿನಲ್ಲಿ ಆಯೋಜಿಸಿದ ವಿಪಕ್ಷಗಳ ಮೈತ್ರಿ ಸಭೆ ಭಾರಿ ಚರ್ಚೆಯಾಗುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಒಗ್ಗಟ್ಟಾಗಿರುವ ವಿಪಕ್ಷಗಳು 2 ದಿನ ಸಭೆ ನಡೆಸಿ ರಣತಂತ್ರ ರೂಪಿಸಿದೆ. ಈ ಹೊಸ ಮೈತ್ರಿಗೆ ಇಂಡಿಯಾ ಎಂದು ಹೆಸರಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೋಲಿಸಲು ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿದೆ. ಹಲವು ರಾಜ್ಯದಲ್ಲಿ ಕುಸ್ತಿ ನಡೆಸುವ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ದೋಸ್ತಿ ಮಾಡಿಕೊಂಡಿದೆ. ಇದೀಗ ವಿಪಕ್ಷ ಮೈತ್ರಿಯ ಸಮನ್ವಯತೆ ಅತೀ ದೊಡ್ಡ ಸವಾಲಾಗಿದೆ.2014, 2019ರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಎನ್‌ಡಿಎಗೆ 2024ರ ಚುನಾವಣೆ ಸವಾಲು ಹೆಚ್ಚಾಗಿದೆ. ಕಳೆದ ಬಾರಿ ಚುನಾವಣೆಗೆ ಉಪಯೋಗಿಸಿದ ರಣತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಲು ಬಿಜೆಪಿ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಮೈತ್ರಿ ಸಭೆಯನ್ನು ಟೀಕಿಸಿದ್ದಾರೆ. ಇದು ಕಟ್ಟರ್ ಭ್ರಷ್ಟಾಚಾರಿಗಳ ಸಮ್ಮೇಳನವಾಗಿದೆ. ಜಾತಿವಾದದ ವಿಷ, ಭ್ರಷ್ಟಾಚಾರ ನಡೆಸುವ ಈ ಪಾರ್ಟಿಗಳು ಸಭೆ ನಡೆಸಿ ಒಗ್ಗಟ್ಟಾಗಿದೆ ಎಂದು ಮೋದಿ ಹೇಳಿದ್ದಾರೆ

Video Top Stories